ಸಸಿ ನೆಟ್ಟ ಹಸಿರು ಲಿಂಗಸುಗೂರು ತಂಡ
ಲಿಂಗಸುಗೂರು : ಎಂದಿನಂತೆ ಪ್ರತಿ ಭಾನುವಾರ ಹಸಿರು ಲಿಂಗಸುಗೂರು ತಂಡದ ಗೆಳೆಯರು ಪಟ್ಟಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದರು.
ಹಸಿರು ಲಿಂಗಸುಗೂರು ತಂಡ ಈಗಾಗಲೇ ಪ್ರತಿ
ಭಾನುವಾರದಂದು ಸಸಿ ನೆಡುವ ಉತ್ತಮ ಕಾಯಕವನ್ನು
ರೂಢಿಸಿಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕಾಂಕ್ರಿಕ್ ಕಾಡಾಗಿರುವ ನಾಡಿನಲ್ಲಿ ಪರಿಸರ ಕಾಳಜಿ ಕೇವಲ ಮಾತಿಗೆ ಸೀಮಿತವಾಗದೇ ಸಮಾನಮನಸ್ಕ ಗೆಳೆಯರ ಬಳಗವು ಈ ಅಮೋಘ ಕಾರ್ಯಕ್ಕೆ ಸಜ್ಜಾಗಿ ನಿಂತಿರುವುದು ಶ್ಲಾಘನೀಯವಾಗಿದೆ.ತಂಡದ ಭೀಮಸೇನ ಕುಲಕರ್ಣಿ, ರಾಚನಗೌಡ ಗಣೆಕಲ್,ಸುರೇಶ ಮೇಟಿ, ಪ್ರಭುಸ್ವಾಮಿ, ಖಾಜಾ ಇಲಾಹಿ, ಇರ್ಫಾನ್ ಚೌದ್ರಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು

