ಶ್ರಾವಣ ಆರಂಭ : ಅಮರೇಶ್ವರ ದರ್ಶನಕ್ಕೆ ಭಕ್ತರ ದಂಡು
ಲಿಂಗಸುಗೂರು : ಶ್ರಾವಣ ಆರಂಭದ ಮುನ್ನಾ ದಿನವಾದ ನಾಗರ
ಅಮವಾಸೆಯಂದು ತಾಲೂಕಿನ ಗುರುಗುಂಟಾ ಶ್ರೀಅಮರೇಶ್ವರ
ದೇವರ ದರ್ಶನಕ್ಕೆ ಸಾವಿರಾರು ಭಕ್ತರ ದಂಡು ಬಂದಿರುವುದು
ಭಾನುವಾರ ಕಂಡುಬಂತು.
ಮಹಿಳೆಯರ ಹಬ್ಬವೆಂದೇ ಗ್ರಾಮೀಣ ಭಾಗದಲ್ಲಿ ಕರೆಯಲ್ಪಡುವ
ಪಂಚಮಿಯಲ್ಲಿ ಹೆಂಗಳೆಯರ ಸಡಗರ, ಹಿಗ್ಗು ಇನ್ನಿಲ್ಲದಂತೆ
ಇರುತ್ತದೆ. ತವರು ಮನೆಗೆ ಬರುವ ಹೆಣ್ಮಕ್ಕಳು ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ.
ಕೊರೊನಾ 3ನೇ ಅಲೆಯು ಆರಂಭವಾಗುತ್ತಿದೆ. ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸರಕಾರ ನಿತ್ಯ
ಹೇಳುತ್ತಲೇ ಇದೆ. ಆದರೆ, ಇದರ ಪರಿವೆಯೇ ಇಲ್ಲದಂಥಹ ಜನರು ಮಾತ್ರ ಅಮರೇಶ್ವರ ದೇವರ ದರ್ಶನಕ್ಕೆ ನೂಕುನುಗ್ಗಲು
ನಡೆಸಿರುವುದು ಮಾತ್ರ ಆತಂಕ ಪಡುವಂಥಹ ವಿಷಯವಾಗಿದೆ.
ದೇವಸ್ಥಾನದೊಳಗೆ ಹೋಗಲು ಸರದಿ ಸಾಲು, ಸಾಮಾಜಿಕ ಅಂತರ ಯಾವುದೂ ಕಂಡು ಬರಲಿಲ್ಲ. ಮುಗಿಬಿದ್ದು ಭಕ್ತರು
ದೇಗುಲದೊಳಗೆ ಪ್ರವೇಶಕ್ಕೆ ಹೋಗುತ್ತಿರುವುದು ಕಂಡುಬಂತು.

