ಮಾ.21ಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಸಭೆ
ಲಿಂಗಸೂಗೂರು : ಮಾರ್ಚ್ 21 ಭಾನುವಾರ ಬೆಳಗ್ಗೆ 11 ಗಂಟೆಗೆ ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಬಸವ ಸಭಾ ಭವನದಲ್ಲಿ ತಾಲೂಕು ಘಟಕ ರಚನೆ ಮಾಡುವ ನಿಮಿತ್ಯ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳ ಲಿಂಗಾಯತ ಸಮುದಾಯದ ಬಾಂಧವರು ಆಗಮಿಸಬೇಕೆಂದು ಬಸವ ಕೇಂದ್ರದ ಅದ್ಯಕ್ಷ ಶಿವಾನಂದ ಐದನಾಳ ಕೋರಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಸಮಾಸಭಾದ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪನವರ ಹಾಗೂ ಜಿಲ್ಲಾ-ತಾಲೂಕು ಲಿಂಗಾಯತ ಮುಖಂಡರ ನೇತೃತ್ವದಲ್ಲಿ ಸಭೆ ಜರುಗಲಿದ್ದು, ಧರ್ಮದ ಜಾಗೃತಿಗಾಗಿ ಪ್ರಗತಿಪರ ಚಿಂತಕರು,ಬಸವಾಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, 94481 38721, 94483 34957, 90089 40600, 9481466515, 94807 71866 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಐದನಾಳ ಕೋರಿದ್ದಾರೆ.

