ಈಚನಾಳ ಗ್ರಾಮದೇವತೆಯರ ಮರೆವಣಿಗೆ : ಭಕ್ತಿಯಲ್ಲಿ ಮಿಂದೆದ್ದ ಭಕ್ತರು
ಲಿಂಗಸೂಗೂರು : ತಾಲೂಕಿನ ಈಚನಾಳ ಗ್ರಾಮದ ಗ್ರಾಮ
ದೇವತೆಯರಾದ ಗಡ್ಡಿ ಗದ್ದೆಮ್ಮ ಹಾಗೂ ಗದ್ದೆಮ್ಮ ದೇವಿಯರ
ಜಾತ್ರೆಯ ಆರಂಭಿಕ ಕಾರ್ಯಕ್ರಮವಾಗಿ ಗುರುವಾರ ಗ್ರಾಮದಲ್ಲಿ ದೇವಿಯರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.
ಮೆರವಣಿಗೆಗೆ ಡೊಳ್ಳು ಕುಣಿತ, ಬಾಜಾಭಜಂತ್ರಿ, ಕುಂಭ
ಕಳಸಗಳೊಂದಿಗೆ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತಾದಿಗಳು ಭಕ್ತಿಯಲ್ಲಿ
ಮಿಂದೆದ್ದರು.
.
ಗ್ರಾ.ಪಂ. ಅದ್ಯಕ್ಷ ಆದಪ್ಪ ಎನ್.ಮೇಟಿ, ಉಪಾದ್ಯಕ್ಷೆ ಅಮರಮ್ಮ ಗಾಳಪೂಜೆ, ಸದಸ್ಯರಾದ ಮರಿಯಪ್ಪ ಕಟ್ಟಿಮನಿ, ಬಸನಗೌಡ ಮಾಲಿ ಪಾಟೀಲ್, ಸೋಮಣ್ಣ ಗುಜ್ಜಲ್, ಹನುಮಂತ ದ್ಯಾಪೂರಿ, ಯಮನಪ್ಪ
ಕಟ್ಟಿಮನಿ, ಗದ್ದೆಪ್ಪ ಡೊಳ್ಳಿನ್, ಸಣ್ಣ ಗದ್ದೆಪ್ಪ ಹಳ್ಳಿ, ಉಜ್ಜಪ್ಪ ಪೂಜಾರಿ,ಶಂಕರಗೌಡ ಹೊಸಮನಿ, ಅಮರೇಶ ಜಿ.ಮೇಟಿ, ಬಸಪ್ಪ ವಾಲಿಕಾರ್, ದೇವಪ್ಪ್ ತಳವಾರ, ಶರಣಬಸವ ಹಡಪದ್ ಸೇರಿ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

