ಮೊಹರಂ ಆಲಂಗಳ ಸವಾರಿ ವೇಳೆ ವಿದ್ಯುತ್ ಶಾಕ್ : ಇಬ್ಬರು ಮೃತ
ಲಿಂಗಸುಗೂರು : ಮೊಹರಂ ನಿಮಿತ್ಯ ಆಲಂ(ದೇವರು)ಗಳ ಸವಾರಿ (ಮೆರವಣಿಗೆ) ಸಂದರ್ಭದಲ್ಲಿ ವಿದ್ಯುತ್ ಶಾಕ್‍ನಿಂದ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಜರುಗಿದೆ. ಇದೇ ವೇಳೆ ಗಾಯಗೊಂಡವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಮೊಹರಂ ಕೊನೆಯ ದಿನದ ಸವಾರಿ (ಖತಲ್ ರಾತ್ರಿ)ಯಲ್ಲಿ ಆಲಂ ಹಿಡಿದ ಹುಸೇನ್‍ಸಾಬ(55) ಅವರಿಗೆ ನಮಸ್ಕರಿಸಲು ಬಂದಿದ್ದ ಹುಲಿಗೆಮ್ಮ (23) ಎನ್ನುವವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಬಳಿಯಲ್ಲಿದ್ದ ನಾಲ್ಕಾರು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಿನ ಜಾವ ದೇವರ ಸವಾರಿ ವೇಳೆ ವಿದ್ಯುತ್ ತಂತಿಗಳು ಮೇಲಿಂದ ಹಾದು ಹೋಗಿರುವುದನ್ನು ಯಾರೂ ಗಮನಿಸದಿರುವುದೇ ಘಟನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದರು.

