ವಿಶ್ವ ಹಸಿವಿನ ದಿನ : 200 ಬಡ ಕುಟುಂಬಗಳಿಗೆ ಫುಡ್‍ಕಿಟ್ ವಿತರಣೆ
ಲಿಂಗಸುಗೂರು : ವಿಶ್ವ ಹಸಿವಿನ ದಿನದ ನಿಮಿತ್ಯ ಶುಕ್ರವಾರ ಬಾಪೂಜಿ ಯುವಕ ಸಂಘ ಹಾಗೂ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಸುಮಾರು 200 ಬಡ ಕುಟುಂಬಗಳಿಗೆ ಹಾಗೂ ಕೋವಿಡ್ ನಿರಾಶ್ರಿತರಿಗೆ ಫುಡ್ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ರಾಜಾ ಶ್ರೀನಿವಾಸ ನಾಯಕ ಗುರುಗುಂಟ ಮತ್ತು ಶಿವಕುಮಾರ ಪಾಟೀಲ್ ಚಿಲ್ಕಾರಾಗಿಯವರ ಸಹಾಯದಿಂದ ನೂರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಲಾಯಿತು. ಯುವಕ ಸಂಘದ ಪದಾಧಿಕಾರಿಗಳು ನಿತ್ಯ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದು, ಬಡವರಿಗೆ ಸಹಾಯ ಮಾಡುವ ದಾನಿಗಳು 9008370059, 9880686432, 8088877850 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಮುಖಂಡರಾದ ಶ್ರೀನಿವಾಸ ಗ್ಯಾಸ್ ಏಜೆನ್ಸಿ, ರಾಜು ತಂಬಾಕೆ, ಅಮರೇಶ ಬಿರಾದಾರ್, ಶರಣಬಸವ, ನವೀನ್‍ಕುಮಾರ, ಸಾಗರ ಗುತ್ತೇದಾರ, ಸುಮಂತ ಕೊಂಪಲ್, ಅಜಯಕುಮಾರ ಶಿವಂಗಿ, ಆಂಜನೇಯ ಭಂಡಾರಿ, ಸಂದೀಪ್ ಕೆಂಭಾವಿ ಸೇರಿ ಇತರ ಸಮಾಜ ಸೇವಕರು ಈ ಸಂದರ್ಭದಲ್ಲಿ ಇದ್ದರು.

