ಗುರುಗುಂಟ ಅಮರೇಶ್ವರ ದೇಗುಲದಲ್ಲಿ ಯುಗಾದಿ ಪಂಚಾಂಗ ಪಠಣ
ಲಿಂಗಸುಗೂರು : ಯುಗಾದಿ ಪಾಡ್ಯದ ಪ್ರಯುಕ್ತ ತಾಲೂಕಿನ
ಗುರುಗುಂಟ ಶ್ರೀ ಅಮರೇಶ್ವರ ದೇಗುಲದಲ್ಲಿ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಾರ್ಷಿಕ ಪಂಚಾಂಗ ಪಠಣ ಮಾಡಲಾಯಿತು.
ವರ್ಷಪೂರ್ತಿ ಜರುಗುವ ಗ್ರಹಣ ವಿಚಾರ, ಮಳೆ-ಬೆಳೆಯ ವಿಚಾರ,ವರ್ಷದಲ್ಲಿ ಜರುಗುವ ಕಂಟಕಾಧಿಗಳು,ರೋಗಾಧಿಗಳ ಬಗ್ಗೆ ಸೇರಿದ್ದ
ಭಕ್ತರಿಗೆ ತಿಳಿಸಲಾಯಿತು.
ದೇವಸ್ಥನದ ಪ್ರಧಾನ ಅರ್ಚಕ ಡಾ.ಗಂಗಾಧರಯ್ಯ ಸ್ವಾಮಿಯವರು ಪಂಚಾಂಗ ಪಠಣ ಮಾಡಿದರು.
ಅರ್ಚಕರು ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಇದ್ದರು.

