ರಾಯಚೂರು

ಲಿಂಗಸುಗೂರು : ವರಮಹಾಲಕ್ಷ್ಮಿ ಹಬ್ಬದಸಂಭ್ರಮ

ಲಿಂಗಸುಗೂರು : ಕೋವಿಡ್‍ನಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೂನಮ್ಮಲ್ಲಿ ಹಬ್ಬ-ಹರಿದಿನಗಳ ಆಚರಣೆಗೇನೂ ಕಡಿಮೆ ಇಲ್ಲ. ಪವಿತ್ರ ಶ್ರಾವಣಮಾಸದಲ್ಲಿ ಆಚರಿಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ಜನರುಸಂಭ್ರಮದಿಂದ ಆಚರಿಸಿದರು.ಹಬ್ಬದ ದಿನಗಳಲ್ಲಿ ಸಹಜವಾಗಿಯೇ ಹಣ್ಣು-ಹಂಪಲು, ಹೂವು-ಕಾಯಿಗಳ ಬೆಲೆ ಹೆಚ್ಚಾಗುತ್ತದೆ. ಆದಗ್ಯೂ ತಮ್ಮ ಆದಾಯಮಿತಿಯಲ್ಲಿಜನರು ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ತಂದು,ಮನೆಗಳಲ್ಲಿ ಲಕ್ಷ್ಮಿಪೂಜೆ ಮಾಡಿದರು.

ತರಹೇವರಿ ಖಾದ್ಯಗಳನ್ನುಸಿದ್ಧಪಡಿಸಿದ ಹೆಂಗಳೆಯರು ಮನೆಮಂದಿಯೊಂದಿಗೆ ಹಬ್ಬದೂಟ ಸವಿದರು.ಕೊವಿಡ್ ಮಹಾಮಾರಿಯಿಂದ ಹಬ್ಬಗಳು ಕಳೆಗುಂದುತ್ತಿವೆ.ನಿರುದ್ಯೋಗ, ಆದಾಯ ವಿಲ್ಲದ ದುಡಿಮೆಯಿಂದ ಮೊದಲಿನಂತೆಹಬ್ಬಗಳನ್ನು ಸಂಭ್ರಮದಿಂದ ಆಚರಿಸುವುದು ಆಗುತ್ತಿಲ್ಲ. ಆದಾಗ್ಯೂ,ಸಂಪ್ರದಾಯದಂತೆ ತಕ್ಕಮಟ್ಟಿಗೆ ಹಬ್ಬವನ್ನು ಆಚರಿಸುತ್ತಿದ್ದೇವೆಂಬುದುಗೃಹಿಣಿಯರ ಅಂಬೋಣವಾಗಿದೆ.

Leave a Reply

Your email address will not be published. Required fields are marked *

error: Content is protected !!