ರಾಯಚೂರು

ಲಿಂಗಸುಗೂರು : ಮೊಹರಂ ಹಬ್ಬದ ಸಂಭ್ರಮಕ್ಕೆ ವಿದಾಯ

ಲಿಂಗಸುಗೂರು : ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಆಚರಣೆ ಮಾಡಿದ್ದು, ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಮೊಹರಂ ಸಂಭ್ರಮಕ್ಕೆ ವಿದಾಯ ಹೇಳಲಾಯಿತು.

ತಾಲೂಕಿನ ಆನೆಹೊಸೂರು ಗ್ರಾಮದ ಮುಖ್ಯ ಬೀದಿಯಲ್ಲಿ
ದೇವರುಗಳ ಭೇಟಿ ಸಂದರ್ಭದಲ್ಲಿ ನೂರಾರು ಜನ ಸೇರಿದ್ದರು.
ಸ್ಥಳೀಯ ಗಡಿಯಾರ ಚೌಕ್‍ನಲ್ಲಿ ಆಲಂಗಳ ಭೇಟಿ ವೇಳೆ ಭಕ್ತರು
ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಪ್ರತಿ ವರ್ಷ ಇದ್ದಷ್ಟು ಸಡಗರ ಸಂಭ್ರಮ ಕಳೆದ ಎರಡು
ವರ್ಷಗಳಿಂದ ಕಾಣಿಸುತ್ತಿಲ್ಲ. ಮನೆ ಮಂದಿಯೆಲ್ಲಾ ಕೂಡಿ ಹಬ್ಬವನ್ನು ಸಡಗರದಿಂದ ಅಚರಣೆ ಮಾಡುತ್ತಿದ್ದೆವು. ಆದರೆ, ಈಗ ಹಬ್ಬದ ವಾತವರಣವೇ ಕಳೆಗುಂದಿದ್ದು, ಇದ್ದುದರಲ್ಲಿಯೇ
ಭಾವೈಕ್ಯತೆಯನ್ನು ಮರೆಯದೇ ಎಲ್ಲರೂ ಸಹೋದರರಂತೆ
ಮೊಹರಂ ಹಬ್ಬವನ್ನು ಆಚರಿಸುತ್ತೇವೆನ್ನುವ ಮಾತುಗಳು ಜನರಲ್ಲಿ
ಕೇಳಿಬಂದವು

Leave a Reply

Your email address will not be published. Required fields are marked *

error: Content is protected !!