ಸರಕಾರಿ ಕಚೇರಿಗಳಲ್ಲಿ ಸದ್ಭಾವನಾ ದಿನಾಚರಣೆ : ಪ್ರತಿಜ್ಞೆ
ಲಿಂಗಸುಗೂರು : ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಶುಕ್ರವಾರ
ಸದ್ಭಾವನಾ ದಿನಾಚರಣೆ ನಿಮಿತ್ಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಪ್ರತಿಜ್ಞಾ ವಿಧಿಯನ್ನು ಹೇಳುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ರೀಚಾರ್ಜ್ ಮಾಡಿಕೊಂಡರು.
ಜಾತಿ, ಧರ್ಮ, ಪ್ರದೇಶ, ಮತ, ಭಾಷೆಯ ಬೇಧ-ಭವವಿಲ್ಲದೇ
ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ, ವಯಕ್ತಿಕವಾಗಿಯಾಗಲೀ ಅಥವಾ ಸಾಮಾಜಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲಾ ಬೇಧ-ಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೇ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಪ್ರತಿಜ್ಞೆ ಮಾಡಿದರು.
ತಹಸೀಲ್ದಾರ ಚಾಮರಾಜ ಪಾಟೀಲ್‍ರ ನೇತೃತ್ವದಲ್ಲಿ ತಹಸೀಲ್ ಕಚೇರಿ ಸಿಬ್ಬಂಧಿಗಳು ಪ್ರತಿಜ್ಞಾ ವಿಧಿ ಹೇಳಿದರೆ, ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ ಸೇರಿ ವಿವಿಧ ಇಲಾಖಾ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಕರ್ತವ್ಯನಿರತ ಸಿಬ್ಬಂಧಿಗಳು ಪ್ರತಿಜ್ಞೆ ಮಾಡಿದರು.

