ರಾಯಚೂರು

ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಗೆ ನೋಟೀಸ್..!

ಲಿಂಗಸುಗೂರು : ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರಿಗೆ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರು ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ.


ಲಿಂಗಸುಗೂರು ಪುರಸಭೆಗೆ ಇವರು ಬರುವುದಕ್ಕೂ ಮುನ್ನ ಮಾನ್ವಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದರು. ಮಾನ್ವಿ ತಾಲೂಕಿನ ಬಾಪೂರು ಗ್ರಾಮದ ಸ.ನಂ. 107/8/6ರಲ್ಲಿ 5.5 ಎಕರೆ ಜಮೀನು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆದೇಶವಾಗಿತ್ತು. ನಗರ ಯೋಜನಾ ಪ್ರಾಧಿಕಾರ ಮಾನ್ವಿಯವರು 81 ನಿವೇಶನಗಳನ್ನು ಮಂಜೂರು ಮಾಡಿ, ಶೇ.40ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಶೇ.100ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಿದ್ದಾರೆ. ಅಲ್ಲದೇ, ಕೆಲಸದ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ದುರ್ನಡತೆಯಿಂದ ವರ್ತಿಸುತ್ತಿದ್ದಾರೆಂದು ಸಾಕ್ಷಿ ಸಮೇತ ದೂರು ಬಂದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಬರುವ 15 ದಿನಗಳೊಳಗೆ ಲಿಖಿತವಾಗಿ ಉತ್ತರ ನೀಡಬೇಕೆಂದು ಮೇ 28ರಂದು ನೀಡಿದ್ದ ನೋಟೀಸ್‍ನಲ್ಲಿ ಎಚ್ಚರಿಸಿದ್ದಾರೆ.


ಸಕಾಲದಲ್ಲಿ ಸೂಕ್ತ ಉತ್ತರ ನೀಡದೇ ಇದ್ದರೆ, ಶಿಸ್ತುಕ್ರಮ ಕೈಗೊಳ್ಳುವುದಾಗಿ ನೋಟೀಸ್‍ನಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!