ಕೋವಿಡ್ ರೋಗಿಗಳ ಚಿಕಿತ್ಸೆಗೆ ಕೊರತೆ ಆಗದಂತೆ ಕ್ರಮ ಲಿಂಗಸುಗೂರು ಆಸ್ಪತ್ರೆಗೆ ಜಂಬೋ ಸಿಲೆಂಡರ್ಸ್, ಆಕ್ಸಿಜನ್ ಕಾನ್ಸಂಟ್ರೇಟರ್ಸ್
ಲಿಂಗಸುಗೂರು : ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸವಲತ್ತುಗಳನ್ನು ಒದಗಿಸಲು ಆಡಳಿತ ಮಂಡಳಿ ಶ್ರಮಿಸುತ್ತಲೇ ಇದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರದಿಂದ 27 ಜಂಬೋ ಸಿಲೆಂಡರ್‍ಗಳು ಹಾಗೂ 10 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳು ಪೂರೈಕೆಯಾಗಿವೆ. ಬಂದ ಸಾಮಗ್ರಿಗಳನ್ನು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನೀಡಲಾಗುತ್ತಿದೆ.
ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ 80 ಹಾಸಿಗೆಗಳ ವ್ಯವಸ್ಥೆ ಇದ್ದು, ಸಧ್ಯಕ್ಕೆ 30 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಆಕ್ಸಿಜನ್ ಸಾಮಗ್ರಿಗಳಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಸೊಂಕಿತರು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ. ಔಷಧ, ಆಕ್ಸಿಜನ್, ಬೆಡ್ ಯಾವುದೇ ಕೊರತೆ ಇಲ್ಲಿ ಇಲ್ಲ. ತುರ್ತು ಚಿಕಿತ್ಸೆಗಾಗಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಶೀಘ್ರ ವ್ಯವಸ್ಥೆ ಆಗುವ ನಿರೀಕ್ಷೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ತಿಳಿಸಿದರು.
ವೈದ್ಯರಾದ ಡಾ.ದಿಗಂಬರ್, ಸಿಬ್ಬಂಧಿಗಳಾದ ಪ್ರಾಣೇಶ್ ಜ್ಯೋಶಿ, ನಾಗರಾಜ, ಸಂಗಾರೆಡ್ಡಿ, ವಿಜಯಕುಮಾರ ಸೇರಿ ಇತರರು ಇದ್ದರು.

