ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ
ಲಿಂಗಸುಗೂರು : ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‍ರ ಜಯಂತಿಯನ್ನು ಆಚರಣೆ ಮಾಡಿದರು.
ಡಾ.ಅಂಬೇಡ್ಕರ್‍ರ ಸಾಧನೆ, ಶ್ರಮ, ಜ್ಞಾನ, ಅವರ ತ್ಯಾಗ,
ಕೊಡುಗೆಗಳು ಸೇರಿ ಬಾಬಾಸಾಹೇಬರು ಎದುರಿಸಿದ ಸಂಕಷ್ಟಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದ ವಜ್ಜಲ್, ಅಂಬೇಡ್ಕರ್‍ರು ಹಾಕಿಕೊಟ್ಟ ಮಾರ್ಗ ನಮಗೆ ಪ್ರೇರಣೆ ಆಗಲೆಂದು ಕರೆ ನೀಡಿದರು.
ಬಿಜೆಪಿ ಅದ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ
ಗಿರಿಮಲ್ಲನಗೌಡ ಪಾಟೀಲ್, ಜಗನ್ನಾಥ ಕುಲಕರ್ಣಿ, ವಿರೇಶಪ್ಪ, ಜೀವನ್ ಬಾಳೆಗೌಡ, ರಮೇಶ ಕಟ್ಟಿಮನಿ ಸೇರಿ ಇತರರು ಇದ್ದರು.

