ಪಿಡಿಓ ನಿರ್ಲಕ್ಷ್ಯ : ಗಬ್ಬೆದ್ದು ನಾರುತ್ತಿವೆ ಈಚನಾಳ ದಲಿತ ಕಾಲೋನಿಗಳು..!
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮದ ದಲಿತ ಕೇರಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಕಲುಶಿತ ನೀರೆಲ್ಲಾ ರಸ್ತೆಗೆ ಹರಿಯುತ್ತಿದೆ. ದಲಿತರ ಕಾಲೋನಿಗಳಲ್ಲಿ ಮೂಲ ಸೌಲಭ್ಯ ಮಾಯವಾದ ಪರಿಣಾಮ ಗಬ್ಬೆದ್ದು ನಾರುತ್ತಿವೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಾದ ಪಿಡಿಓ ಅವರು ನಿರ್ಲಕ್ಷ್ಯ ವಹಿಸಿದ್ದಾರೆನ್ನವ ಆರೋಪಗಳು ಕೇಳಿ ಬರುತ್ತಿವೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗದೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡು ಕಚೇರಿಗೆ ಬಂದರೂ ಜನರಿಗೆ ಸ್ಪಂಧಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಒತ್ತಾಯದ ಬಳಿಕ ಕಾಟಾಚಾರದ ಪರಿಶೀಲನೆ ನಡೆಸಿ ಕೈತೊಳೆದುಕೊಳ್ಳುತ್ತಾರೆ.
ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ದುರಸ್ತಿಗಾಗಿ 2021-22ನೇ ಸಾಲಿನಲ್ಲಿ 31,860 ರೂಪಾಯಿ ಖರ್ಚು ಮಾಡಿದರೂ ಕೆಲವೇ ದಿನಗಳಲ್ಲಿ ಪುನಃ ಕೆಟ್ಟುಹೋಗಿದೆ. ಕಳಪೆಯಾಗಿ ದುರಸ್ತಿ ಕೆಲಸ ಆಗಿರುವ ಬಗ್ಗೆ ಸಾರ್ವಜನಿಕರಲ್ಲಿ ಆರೋಪಗಳು ಕೇಳಿ ಬರುತ್ತಿದ್ದು, ಪಿಡಿಓ ಕಾರ್ಯವೈಖರಿಗೆ ಖಂಡನೆ ವ್ಯಕ್ತವಾಗಿವೆ. ಕೂಡಲೇ ಪಿಡಿಓ ಜನರ ಸಮಸ್ಯೆಗಳಿಗೆ ಕಿವಿಗೊಟ್ಟು, ಕೋವಿಡ್ ಸಂಕಷ್ಟ ಕಾಲದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡುವ ಜನರ ಆರೋಗ್ಯದ ಕಾಳಜಿಗೆ ಮುಂದಾಗಬೇಕೆನ್ನುವುದು ಸಮಾಜ ಸೇವಕ ಶರಣಬಸವರ ಒತ್ತಾಯವಾಗಿದೆ.

