ಡಿವೈಎಸ್‍ಪಿ ಸುಬೇದಾರ್‍ರಿಗೆ ಕರವೇ ಸನ್ಮಾನ
ಲಿಂಗಸುಗೂರು : ಕಲಬುರಗಿ ಈಶಾನ್ಯ ವಲಯ ಐಜಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್‍ಪಿ ಎಸ್.ಹೆಚ್.ಸುಬೇದಾರ್ ಅವರು ರಾಷ್ಟ್ರಪತಿ ಪದಕ ಪಡೆದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಗಡಿಯಾರ ಚೌಕ್‍ನಲ್ಲಿ ಕರವೇ ಅದ್ಯಕ್ಷ ಜಿಲಾನಿಪಾಷಾ ನೇತೃತ್ವದಲ್ಲಿ ಜಮಾಯಿಸಿದ ಅಭಿಮಾನಿಗಳು ಡಿವೈಎಸ್‍ಪಿ ಸುಬೇದಾರರ ಸೇವೆಯನ್ನು ಪರಿಗಣಿಸಿ ಅವರಿಗೆ ರಾಷ್ಟ್ರಪದಕ ಬಂದಿರುವುದು ಸಂತಸದ ವಿಷಯ. ಲಿಂಗಸುಗೂರು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸುಬೇದಾರ ಅವರು ಪ್ರಾಮಾಣಿಕ ಮತ್ತು ನಿಷ್ಕಳಂಕಿತ ಅಧಿಕಾರಿಯಾಗಿದ್ದರು ಎಂದು ಸನ್ಮಾನಿಸಲಾಯಿತು.
ಕರವೇ ಅದ್ಯಕ್ಷ ಜಿಲಾನಿಪಾಷಾ, ಕಾರ್ಯದರ್ಶಿ ಶಿವರಾಜ ನಾಯ್ಕ, ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ಖಜಾಂಚಿ ಅಜೀಜಪಾಷಾ, ಇರ್ಫಾನ್ ಖುರೇಶಿ, ಜಮೀರ್‍ಖಾನ್ ಸೇರಿ ಇತರರು ಇದ್ದರು.

