ರಾಯಚೂರು

ಜ.16 ರಿಂದ ರಾಷ್ಟ್ರಮಟ್ಟದ ಕಾರ್ಯಾಗಾರ

ಲಿಂಗಸುಗೂರು : ಇದೇ ಜನೆವರಿ ತಿಂಗಳ 16ನೇ ತಾರೀಖಿನಿಂದ 18ರ ವರೆಗೆ ರಾಷ್ಟ್ರಮಟ್ಟದ ವೀರಶೈವ ಅರ್ಚಕ, ಪುರೋಹಿತ ಹಾಗೂ ಆಗಮಿಕರ ಕಾರ್ಯಾಗಾರ ಜರುಗಲಿದೆ ಎಂದು ವಿದ್ವಾನ್ ಡಾ.ಗಂಗಾಧರಯ್ಯಸ್ವಾಮಿ ತಿಳಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯ ಹಾಗೂ ವೈಧಿಕ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಶ್ರೀ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪ ವಿಜಯನಗರ, ಮನುವನ ಮೆಟ್ರೋ ಸ್ಟೇಷನ್ ಹತ್ತಿರ ಬೆಂಗಳೂರಿನಲ್ಲಿ ಕಾರ್ಯಾಗಾರ ಜರುಗಲಿದೆ. ಗೃಹಶಾಂತಿ ಕುರಿತಾಗಿ ನಡೆಯುವ ಕಾರ್ಯಾಗಾರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ. ಸಚಿವ ಬಿ.ಶ್ರೀರಾಮುಲು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅದ್ಯಕ್ಷ ಬಿ.ಎಸ್.ಪರಮಶಿವಯ್ಯ ಸೇರಿ ಹಲವು ಗಣ್ಯರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.


ರಾಯಚೂರು ಜಿಲ್ಲಾ ವೀರಶೈವ ಅರ್ಚಕರ ಮತ್ತು ಪುರೋಹಿತರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಮುಂಚಿತವಾಗಿ ಕಾರ್ಯಕ್ರಮಕ್ಕೆ ಬರುವವರು ತಮ್ಮ ಹೆಸರುಗಳನ್ನು ವಿದ್ವಾನ್ ಡಾ.ಗಂಗಾಧರಯ್ಯಸ್ವಾಮಿ 9986060625, ಪ್ರಕಾಶ ನಂದಿ 9739031111, ಶಿವಯ್ಯ ರಾಯಚೂರು 9663968792, ಬಸವರಾಜ ಮನ್ಸಲಾಪೂರ 9902093151 ಇವರುಗಳ ಬಳಿ ನೋಂದಾಯಿಸಿಕೊಳ್ಳುವಂತೆ ಡಾ.ಗಂಗಾಧರಯ್ಯಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!