ಶ್ರಾವಣ ಶುಕ್ರವಾರ : ಮುತ್ತೈದೆಯರಿಗೆ ಉಡಿ ತುಂಬಿದ ಬಿಜೆಪಿ ಕಾರ್ಯಕರ್ತರು
ಲಿಂಗಸುಗೂರು : ಶ್ರಾವಣ ಮಾಸದ ಶುಕ್ರವಾರದ ದಿನ ಸ್ಥಳೀಯ 11ನೇ ವಾರ್ಡಿನ ಗ್ರಾಮ ದೇವತೆ ಪಾಲಕಮ್ಮ ದೇವಾಲಯದ ಆವರಣದಲ್ಲಿ ಬಿಜೆಪಿ ಮಹಿಳಾ ಮುಖಂಡರುಗಳಿಂದ ಸಾಮೂಹಿಕವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾ ಉಸ್ತುವಾರಿ ಜ್ಯೋತಿ ಸುಂಕದ ಮಾತನಾಡಿ, ಹೆಣ್ಣು ಮಕ್ಕಳಿಗೆ ಬಿಜೆಪಿ ಪಕ್ಷ ತವರು ಮನೆ ಇದ್ದ ಹಾಗೆ. ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ರು ತಾಲೂಕಿನ ಮಹಿಳೆಯರ ಕಷ್ಟಗಳಿಗೆ ನೇರವಾಗುವ ಮೂಲಕ ಹಿರಿಯಣ್ಣ ನಂತೆ ಇರುವುದು ನಮ್ಮಗಳ ಸೌಭಾಗ್ಯವೆಂದು ಹೇಳಿದರು. ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ಕಾಟವ ಮಾತನಾಡಿ, ಮಹಿಳೆಯರಿಗೆ ಗೌರವ ತೊರಿಸುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಮ್ಮ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಸದಾ ಬಿಜೆಪಿ ಮುಂದಿರುತ್ತದೆ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ್ ಎಮ್. ವಜ್ಜಲ್, ಮುಖಂಡರಾದ ಜಗನ್ನಾಥ ಕುಲಕರ್ಣಿ, ಮದನ ಮೋಹನ ಜಿ.ವೆಂಕೋಬ ಹಟ್ಟಿ, ರಮೇಶ್ ಹಟ್ಟಿ, ಚಿದಾನಂದ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಸ್ಮೀತಾ ಅಂಗಡಿ, ಸದಸ್ಯರಾದ ನೀಲಮ್ಮ ಪಾಟೀಲ್, ಸುಮಾ ಪಾಟೀಲ್ ಸೇರಿ ಇತರರು ಪಾಲ್ಗೊಂಡಿದ್ದರು.

