ಶಿಕ್ಷಣಕ್ಕೆ ಆಧ್ಯತೆ ನೀಡಲು ಬಿಇಓ ರಾಠೋಡ್ ಕರೆ
ಲಿಂಗಸುಗೂರು : ಸತತ ಲಾಕ್‍ಡೌನ್‍ನಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಟಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಾಲಕರು ಅಸಡ್ಡೆ ತೋರದೇ, ಮಕ್ಕಳಿಗೆ ಮನೆಯಲ್ಲಿಯೇ ಅಕ್ಷರಾಭ್ಯಾಸ ಮಾಡಿಸಬೇಕು. ಶಾಲಾರಂಭದ ಬಳಿಕ ಕಡ್ಡಾಯವಾಗಿ ಶಿಕ್ಷಣ ಕಲಿಸಲು ಮುಂದಾಗಬೇಕು. ಶಿಕ್ಷಣವೇ ನಮ್ಮ ಅಭಿವೃದ್ಧಿಯ ಅಸ್ತ್ರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ಹೇಳಿದರು.
ಸ್ಥಳೀಯ ಗುರುಭವನದಲ್ಲಿ ಆಯೋಜಿಸಿದ್ದ ತಾಲೂಕ ಛಲವಾದಿ ಮಹಾಸಭಾ ಹಾಗೂ ಛಲವಾದಿ ನೌಕರ ಬಾಂದವರ ಸ್ವಾಗತ ಮತ್ತು ಬೀಳ್ಕೋಡಗೆ ಹಾಗೂ ಸಮಾಜ ಬಂದುಗಳ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‍ರವರ ಆದರ್ಶಗಳನ್ನು ಪಾಲನೆ ಮಾಡಬೇಕು. ನಮ್ಮ ಗುರಿ ಮುಟ್ಟುವರಿಗೂ ಛಲ ಬೀಡಬಾರದು ಎಂದರು. ನಿವೃತ್ತಿ ಜೀವನಕ್ಕೆ ಕಾಲಿಟ್ಟ ನೌಕರರಿಗೆ ಶುಭ ಹಾರೈಸಿದರು.
ಛಲವಾದಿ ಮಹಾಸಭಾದ ತಾಲೂಕ ಅಧ್ಯಕ್ಷ ಲಿಂಗಪ್ಪ ಪರಂಗಿ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ, ಸರಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಕರ್ತವ್ಯದಲ್ಲಿ ನಿμÉ್ಠ, ಪ್ರಾಮಾಣಿಕತೆಯೊಂದಿಗೆ ಇಲಾಖೆಯ ಬಳಗದ ಜೊತೆಗೆ ಹೊಂದಾಣಿಕೆ, ಪ್ರೀತಿ ವಿಶ್ವಾಸದಿಂದ ಸೇವೆ ಸಲ್ಲಿಸಿದ ನೌಕರರು ಇತರರಿಗೆ ಮಾದರಿಯಾಗಿದ್ದಾರೆ. ಪರಿಪೂರ್ಣ ಕರ್ತವ್ಯ ನಿರ್ವಹಿಸಿದ ನಿವೃತ್ತ ನೌಕರರ ಪರಿಶ್ರಮದ ಸೇವೆ ಶ್ಲಾಘಿಸಿದರು.
ಕೃಷಿ ಇಲಾಖೆ ಉಪನಿರ್ದೇಶಕಿ ಸರಸ್ವತಿ, ಬಿಆರ್‍ಸಿ ಹನುಮಂತಪ್ಪ ಕೊಳಗೇರಿ, ಛಲವಾದಿ ನೌಕರರ ಅಧ್ಯಕ್ಷ ಶಿವಪುತ್ರ ಬೀದರ್, ಅಂಚೆ ನೌಕರ ಕೃಷ್ಣ ಮೋತಿ, ರಾಯಪ್ಪ, ವಂಶಿರಾಮಕೃಷ್ಣ, ಅಮೀನಗಡ ಗ್ರಾಪಂ ಅಧ್ಯಕ್ಷ ಮಾನಪ್ಪ, ಮುಖಂಡರಾದ ಪ್ರಭುಲಿಂಗ ಮೇಗಳಮನಿ, ಪರಶುರಾಮ ನಗನೂರು, ಹನುಮಂತ ಚುಕನಟ್ಟಿ, ಸಂಜೀವಪ್ಪ ಹುನಕುಂಟಿ ಸೇರಿದಂತೆ ಇತರರು ಇದ್ದರು.

