ಬೆಂಗಳೂರಿನ ಅರಮನೆಯಲ್ಲಿ ವಜ್ಜಲ್ ಕುಟುಂಬದ ಮದುವೆ : ದೆಹಲಿಗೆ ತೆರಳಿ ಆಮಂತ್ರಣ
ಲಿಂಗಸುಗೂರು : ಡಿಸೆಂಬರ್ 5ರಂದು ರಾಜಧಾನಿ ಬೆಂಗಳೂರು ಮಹಾನಗರದ ಅರಮನೆಯಲ್ಲಿ ವಜ್ಜಲ್ ಕುಟುಂಬದ ವೈಭವದ ಮದುವೆ ಸಮಾರಂಭ ಜರುಗಲಿದ್ದು, ಗಣ್ಯರನ್ನು ಆಹ್ವಾನಿಸಲು ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ರು ದೆಹಲಿಗೆ ತೆರಳಿ ಕೇಂದ್ರ ಸಚಿವರಿಗೆ, ಗಣ್ಯರಿಗೆ ಆಮಂತ್ರಣವನ್ನು ನೀಡಿದರು.

ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ಕೇಂದ್ರೀಯ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಕಲ್ಲಿದ್ದಲು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಗಣ್ಯರಿಗೆ ಡಿಸೆಂಬರ್ 5 ರಂದು ಬೆಂಗಳೂರು ನಗರದ ಅರಮನೆಯಲ್ಲಿ ನಡೆಯಲಿರುವ ತಮ್ಮ ಸಹೋದರ
ನಾಗಪ್ಪ ಡಿ ವಜ್ಜಲ್ ರ ಪುತ್ರಿ ಮದುವೆಗೆ ಆಹ್ವಾನಿಸಿ ವಿವಾಹ ಆಮಂತ್ರಣ ಪತ್ರಿಕ್ಕೆನ್ನು ನೀಡದರು.
ಇತ್ತ ಲಿಂಗಸುಗೂರು ಕ್ಷೇತ್ರದಲ್ಲಿ ಯುವ ಮುಖಂಡ ಈಶ್ವರ ವಜ್ಜಲ್ ಅವರು ಮದುವೆಯ ಆಮಂತ್ರಣ ಕ್ಷೇತ್ರದ ಜನರಿಗೆ ತಲುಪಿಸುತ್ತಿದ್ದಾರೆ. ಅದ್ಧೂರಿಯಾಗಿ ಮದುವೆ ಸಮಾರಂಭ ಬೆಂಗಳೂರಿನಲ್ಲಿ ಜರುಗಲಿದ್ದು, ಕ್ಷೇತ್ರದ ಜನತೆ ಮದುವೆಗೆ ಶುಭ ಹಾರೈಸಲು ಅಂದು ತೆರಳಲಿದ್ದಾರೆ.

