ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಂಗನವಾಡಿ ನೌಕರರ ಪ್ರತಿಭಟನೆ
ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಮಿತಿಯ ಕರೆ ಮೇರೆಗೆ ಅಂಗನವಾಡಿ ನೌಕರರು ಪ್ರತಿಭಟನೆ ಮಾಡಿದರು.
ಶಿರಸ್ತೆದಾರ ಶಾಲಂಸಾಬರ ಮೂಲಕ ಮುಖ್ಯಮಂತ್ರಿಗಳಿಗೆ
ಮನವಿ ಸಲ್ಲಿಸಿದ ಅವರು, ಮಹಿಳಾ ಮತ್ತು ಮಕ್ಕಳ ಇಲಾಖೆ
ಶಿಫಾರಸ್ಸು ಮಾಡಿರುವ 339.48 ಲಕ್ಷ ರೂಪಾಯಿ ಅನುದಾನ
ಬಿಡುಗಡೆ ಮಾಡಬೇಕು. ಇಲಾಖೆಯ ಸಚಿವರಿಂದಲೇ
ಕೋಳಿಮೊಟ್ಟೆ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆ
ನಡೆಸಬೇಕು. ಕೊರೊನಾ ಸಂದರ್ಭದಲ್ಲಿ ನಿಧನರಾದ
ಕುಟುಂಬದವರಿಗೆ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ
ನೀಡಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ
ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಟ ವೇತನ ಜಾರಿ
ಮಾಡಬೇಕು. ಅಂಗನವಾಡಿ ನೌಕರರನ್ನು ಖಾಯಂ
ಮಾಡಬೇಕು. ಅಲ್ಲಿಯವರೆಗೂ ಕಾರ್ಯಕರ್ತೆಯರಿಗೆ 30 ಸಾವಿರ
ಮತ್ತು ಸಹಾಯಕಿಯರಿಗೆ 21 ಸಾವಿರ ರೂಪಾಯಿ ವೇತನ
ಕೊಡಬೇಕು.
ಕೇಂದ್ರ ಸರಕಾರ ಐಸಿಡಿಎಸ್ ಯೋಜನೆಗೆ ತನ್ನ ಪಾಲಿನ
ಶೇರನ್ನು ಹೆಚ್ಚಿಸಬೇಕು. ಗುರುತರ ಕಾಯಿಲೆಯಳಿಗೆ
ನೀಡಬೇಕಾದ ಮರಣ ಪರಿಹಾರ ಮೊತ್ತ ಹಾಗೂ ನಿವೃತ್ತಿಯಾದ
ಇಡುಗಂಟು ನೀಡಬೇಕು. ಗುರುತರ ಕಾಯಿಲೆಗಳಿಗೆ
ನೀಡಬೇಕಾದ ವೈದ್ಯಕೀಯ ಸೌಲಭ್ಯಕ್ಕಾಗಿ ಅರ್ಜಿ ನೀಡಿದವರಿಗೆ ಹಣ ಬಿಡುಗಡೆ ಮಾಡಬೇಕು. ಆಹಾರಧಾನ್ಯ ದಾಸ್ತಾನುಗಳನ್ನು
ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಬೇಕು. ಎಲ್.ಐ.ಸಿ.
ಕಂತುಗಳ ಹಣ ಪಾವತಿಸದೇ ಇರುವ ಹಣ ವಾಪಸ್ ನೀಡಬೇಕು.
2017ರ ಸರಕಾರಿ ಆದೇಶದಂತೆ ಇಲಾಖೆಯೇತರ ಕೆಲಸಗಳಿಗೆ
ಅಂಗನವಾಡಿ ನೌಕರರನ್ನು ನಿಯೋಜನೆ ಮಾಡಬಾರದು. ಈ
ಪೋಷಣ್ ಆಪ್‍ಗೆ ಅಂಗನವಾಡಿ ಕಾರ್ಯಕರ್ತೆಯರ ವೇತನ
ಪಾವತಿಯನ್ನು ತಳುಕು ಹಾಕುವ ನಿರ್ಧಾರವನ್ನು ಕೂಡಲೇ
ಹಿಂಪಡೆಯಬೇಕು. ವೆಬ್ ಅಥವಾ ಅಂತರ್ಜಾಲ ಆಧಾರಿತ ವರದಿ
ವ್ಯವಸ್ಥೆಗೆ ಸ್ಥಳಾಂತರ ಆಗುವ ಮುನ್ನ ಮೊಬೈಲ್ ಫೋನ್,
ಮೊಬೈಲ್ ದತ್ತಾಂಶ ಮಾಹಿತಿ, ತರಬೇತಿ, ನೆಟ್‍ವರ್ಕ್‍ಗಳ ಲಭ್ಯತೆ
ಇತ್ಯಾದಿಗಳಿಗೂ ಹಣಕಾಸು ನೀಡಬೇಕು ಸೇರಿ ಇತರೆ
ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು
ಒತ್ತಾಯಿಸಿದರು.
ಸಂಘಟನೆ ಗೌರವಾದ್ಯಕ್ಷ ಶೇಕ್ಷಾ ಖಾದ್ರಿ, ಅದ್ಯಕ್ಷೆ ಲಕ್ಷ್ಮಿ
ನಗನೂರು, ಕಾರ್ಯದರ್ಶಿ ಮಹೇಶ್ವರಿ, ಮಲ್ಲನಗೌಡ
ಮುದಗಲ್, ನೂರಮ್ಮ, ಸರಸ್ವತಿ ರಾಠೋಡ್, ಅಮರಮ್ಮ,
ಶಶಿಕಲಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

