ಬಿಜೆಪಿ ಮಹಿಳಾ ಮೋರ್ಚಾದಿಂದ ತರಕಾರಿ ಕಿಟ್‍ಗಳ ವಿತರಣೆ
ಲಿಂಗಸುಗೂರು : ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಅದ್ಯಕ್ಷೆ ಜಯಶ್ರೀ ಸಕ್ರಿಯವರ ನೇತೃತ್ವದಲ್ಲಿ ಶುಕ್ರವಾರ ಕಾರ್ಯಕರ್ತರು ಬಡವರಿಗೆ ತರಕಾರಿ ಕಿಟ್‍ಗಳನ್ನು ವಿತರಣೆ ಮಾಡಿದರು.
ಸತತ ಲಾಕ್‍ಡೌನ್‍ನಿಂದ ತತ್ತರಿಸಿ ಹೋಗಿರುವ ಬಡ, ನಿರ್ಗತಿಕ, ಕೂಲಿ ಕಾರ್ಮಿಕ ಕುಟುಂಬಗಳು ಜೀವನ ಸಾಗಿಸುವುದು ದುಸ್ಥರವಾಗಿದೆ. ಹೃದಯ ಶ್ರೀಮಂತಿಕೆ ಇರುವ ನಾನಾ ಸಂಘಟಕರು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಉದ್ಯಮಿಗಳು ಊಟ, ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಣೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾದ ಕಾರ್ಯಕರ್ತರೂ ಈಗಾಗಲೇ ಫುಡ್‍ಕಿಟ್‍ಗಳನ್ನು ವಿತರಿಸಿದ್ದಾರೆ. ಮುಂದುವರೆದು ಇಂದು ತರಕಾರಿ ಕಿಟ್‍ಗಳನ್ನು ಮನೆ-ಮನೆಗೆ ತೆರಳಿ ಹಂಚಿಕೆ ಮಾಡಿ ಬಡವರ ಒಪ್ಪತ್ತಿನ ಊಟಕ್ಕೆ ಆಸರೆಯಾದರು.
ಮಹಿಳಾ ಮೋರ್ಚಾದ ಶೋಭಾ ಕಾಟವಾ, ಶ್ವೇತಾ ಲಾಲಗುಂದಿ, ನೀಲಮ್ಮ ಪಾಟೀಲ್, ಖಾಜಾಬೀ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

