ಲಿಂಗಸುಗೂರು : ಹಿರಿಯ ವಕೀಲ ಎಸ್.ಪಿ.ಪಾಟೀಲ್ ನಿಧನ
ಲಿಂಗಸುಗೂರು : ಸ್ಥಳೀಯ ಹಿರಿಯ ನ್ಯಾಯವಾದಿ ಶಂಕರಗೌಡ ಪಂಪನಗೌಡ (ಎಸ್.ಪಿ.ಪಾಟೀಲ್) ಪಾಟೀಲ್ ಅವರು ನಿಧನರಾಗಿದ್ದಾರೆ.
ಸಾಹಿತ್ಯ ಪ್ರೇಮಿಯೂ, ವಾಗ್ಮಿಯೂ ಆಗಿದ್ದ ಪಾಟೀಲ್‍ರ ಅಗಲಿಕೆಗೆ ಗಣ್ಯರು, ವಿವಿಧ ಸಮಾಜದ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರ ಅಗಲಿಕೆ ನೋವು ಭರಿಸುವ ಶಕ್ತಿ ಭಗವಂತ ಅವರ ಕುಟುಂಬ ವರ್ಗಕ್ಕೆ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ.
ಪತ್ನಿ, ಮೂವರು ಪುತ್ರಿಯರು ಸೇರಿ ಅಪಾರ ಬಂಧು ಬಳಗ, ಸ್ನೇಹಿತ ವರ್ಗವನ್ನು ಬಿಟ್ಟು ಅಗಲಿರುವ ಹಿರಿಯ ಜೀವದ ಅಂತ್ಯಕ್ರಿಯೆ ಬುಧವಾರ ಸಂಜೆ ಪಟ್ಟಣದಲ್ಲಿ ನೆರವೇರಿಸಲಾಯಿತು.

