ರಾಯಚೂರು

ಲಿಂಗಸುಗೂರು : ಭೀಮ್ ಆರ್ಮಿ ಸಂಘಟನೆಯಿಂದ 100 ಫುಡ್‍ಕಿಟ್ ವಿತರಣೆ

ಲಿಂಗಸುಗೂರು : ತಾಲೂಕು ಭೀಮ್ ಆರ್ಮಿ ಸಂಘಟನೆ ವತಿಯಿಂದ ಪಟ್ಟಣದಲ್ಲಿ 100 ಜನ ಬಡ ಕುಟುಂಬಗಳಿಗೆ ಫುಡ್‍ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಕೋವಿಡ್ ಲಾಕ್‍ಡೌನ್ ಪರಿಣಾಮ ನಿತ್ಯದ ದುಡಿಮೆಯನ್ನೇ ನೆಚ್ಚಿಕೊಂಡಿದ್ದ ಹಲವು ಕುಟುಂಬಗಳು ದುಡಿಮೆ ಇಲ್ಲದೇ ಬದುಕು ಸಾಗಿಸುವುದು ಕಷ್ಟಕರವಾಗುತ್ತಿದೆ. ಮಾನವೀಯತೆಯ ದೃಷ್ಠಿಯಿಂದ ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಭೀಮ್‍ಆರ್ಮಿ ಸಂಘಟನೆ ಕಾರ್ಯಕರ್ತರು ಕೈಗೊಂಡಿರುವ ಈ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಪಾಮಯ್ಯ ಮುರಾರಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು. ಪಿಕಾರ್ಡ್ ಬ್ಯಾಂಕ್ ಅದ್ಯಕ್ಷ ಮಹಾಂತೇಶ ಪಾಟೀಲ್, ಸಂಘಟನೆ ಗೌರವಾದ್ಯಕ್ಷ ಖಾಲಿದ್ ಚಾವೂಸ್, ಅದ್ಯಕ್ಷ ಗುರುಪ್ರಶಾಂತ್ ಮ್ಯಾಗೇರಿ, ನಗರ ಘಟಕ ಅದ್ಯಕ್ಷ ಅಜಯ್ ಬ್ಯಾಲಿ, ಪರಶುರಾಮ ನಗನೂರು, ಶೇರ್‍ಅಲಿ, ಅಭಿಷೇಕ್ ಸಜ್ಜನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!