ವಯೋ ನಿವೃತ್ತಿ : ಗೌರವ ಸನ್ಮಾನ
ಲಿಂಗಸುಗೂರು : ಕೃಷ್ಣಾ ಭಾಗ್ಯ ಜಲನಿಗಮ ಎನ್‍ಆರ್‍ಬಿಸಿ ಉಪವಿಭಾಗದ ಎಇಇ ಮಹೆಬೂಬಸಾಬ ಸಂತೆಕೆಲ್ಲೂರು ಅವರು ವಯೋ ನಿವೃತ್ತಿ ಹೊಂದಿದ ಪರಿಣಾಮ ಗೆಳೆಯರ ಬಳಗದಿಂದ ಆತ್ಮೀಯವಾಗಿ ಗೌರವ ಸನ್ಮಾನ ಮಾಡಲಾಯಿತು.
ಪ್ರಥಮ ದರ್ಜೆ ಗುತ್ತೇದಾರ ಹಾಗೂ ಉದ್ಯಮಿ ಸುಭಾಶ್ಚಂದ್ರ ಮೇಟಿಯವರ ನೇತೃತ್ವದಲ್ಲಿ ಮಹೆಬೂಬಸಾಬರಿಗೆ ಸನ್ಮಾನಿಸಿ ಗೌರವಿಸಿದರು. ನಿವೃತ್ತಿ ಜೀವನ ಸುಖಕರವಾಗಿರಲೆಂದು ಈ ಸಂದರ್ಭದಲ್ಲಿ ಶುಭ ಕೋರಲಾಯಿತು.

