ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್ : ಎಸಿ ಭೇಟಿ-ಪರಿಶೀಲನೆ
ಲಿಂಗಸುಗೂರು : ಸ್ಥಳೀಯ ಅನ್ನದಾನಗೌಡ ಪಾಟೀಲ್ ಬಯ್ಯಾಪೂರ ಮತ್ತು ಸಂಜೀವಿನಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲಾಗಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಗತ್ಯಗಳನ್ನು ಪರಿಶೀಲಿಸಿದರು.
ಸರಕಾರವು ನಿಗದಿಪಡಿಸಿದ ದರದಲ್ಲಿ ಸಾಮಾನ್ಯ ವಾರ್ಡ್ ಪ್ರತಿದಿನಕ್ಕೆ 5200 ರೂಪಾಯಿ, ಹೆಚ್‍ಡಿಯು 8000 ರೂಪಾಯಿ, ಐಸೊಲೇಷನ್ ಐಸಿಯು ವೆಂಟಿಲೇಟರ್ ರಹಿತ 9750 ರೂಪಾಯಿ, ಐಸೊಲೇಷನ್ ಐಸಿಯು ವೆಂಟಿಲೇಟರ್ ಸಹಿತ ವಾರ್ಡ್‍ನಲ್ಲಿ 11500 ರೂಪಾಯಿಗಳಂತೆ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಸರಕಾರದ ಮಾರ್ಗಸೂಚಿಗಳ ಜೊತೆಗೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಎಸಿ ಡಂಬಳ್ ಸೂಚನೆ ನೀಡಿದರು.
ತಹಸೀಲ್ದಾರ್ ನಾಗಪ್ರಶಾಂತ ಯಜಮಾನ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್, ಸಿಪಿಐ ರಮೇಶ ಕುಲಕರ್ಣಿ ಸೇರಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂಧಿಗಳು ಇದ್ದರು.

