ಕೋವಿಡ್ ಮೃತನ ಅಂತ್ಯಸಂಸ್ಕಾರ ಮಾಡಿದ ಪಿಎಫ್‍ಐ ತಂಡ
ಲಿಂಗಸುಗೂರು : ಕೋವಿಡ್ ಸೊಂಕಿನ ದಾಳಕ್ಕೆ ಬಳಲಿ ಜೀವ ಕಳೆದುಕೊಂಡ ಸುಮಾರು 55 ವರ್ಷದ ವಯೋವೃದ್ಧರ ಅಂತ್ಯಸಂಸ್ಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ಕಾರ್ಯಕರ್ತರು ನೆರವೇರಿಸಿದರು.
ಪಟ್ಟಣದ ನಿವಾಸಿಯೊಬ್ಬ ಸೊಂಕಿನಿಂದ ಬಳಲುತ್ತಿದ್ದ. ಆತನನ್ನು ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿರಲು ವೈದ್ಯರು ಸೂಚನೆ ನೀಡಿದ್ದರು. ಕಳೆದ 8-10 ದಿನಗಳಿಂದ ಮನೆಯಲ್ಲಿಯೇ ಔಷಧಿಗಳನ್ನು ಸೇವಿಸುತ್ತಾ ಇದ್ದ ವ್ಯಕ್ತಿಯ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿರುವ ಪರಿಣಾಮ ಶುಕ್ರವಾರ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ. ಮೃತ ಕೋವಿಡ್ ಸೊಂಕಿತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಯಾರೂ ಮುಂದೆ ಬಾರದ ಪರಿಸ್ಥಿತಿಯಲ್ಲಿ ಪಿಪಿ ಕಿಟ್‍ಗಳನ್ನು ಧರಿಸಿ ಸ್ವಯಂ ಪ್ರೇರಿತರಾಗಿ ಮುಂದೆ ಬಂದ ಗುರುಗುಂಟದ ಪಿಎಫ್‍ಐ ಕಾರ್ಯಕರ್ತರು ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.

