ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮುಖಂಡರು
ಲಿಂಗಸುಗೂರು : ತಾಲೂಕಿನ ನೀರಲಕೇರಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಗ್ರಾಮದ ಹಿರಿಯರಾದ ದೇವರೆಡ್ಡೆಪ್ಪ ಹಾದಿಮನಿ, ನಾಗರೆಡ್ಡೆಪ್ಪ ರಾಯಚೂರು, ಜಟ್ಯಪ್ಪ ಲಕ್ಕುಂದಿ, ಅಮರಪ್ಪ ರಾಯಚೂರು, ಅಮರಪ್ಪ ಸಾಹುಕಾರ, ಬಸಪ್ಪ ಬಳಿಗಾರ ಸೇರಿ ಇತರೆ ಮುಖಂಡರುಗಳು ಕಾಂಗ್ರೆಸ್ ಪಕ್ಷದಿಂದ ದೂರವಾಗಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.
ಪಕ್ಷ ಸೇರ್ಪಡೆ ಸಂದರ್ಭದಲ್ಲಿ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀ, ಮುಖಂಡರಾದ ನಾಗಪ್ಪ ವಜ್ಜಲ್, ಹನುಮಂತಪ್ಪ ತೊಗರಿ, ಡಿಜಿ ಗುರಿಕಾರ, ಬಸವರಾಜ ಹೊನ್ನಹಳ್ಳಿ, ಸಾಹುಕಾರ ದೊಡ್ಡಪ್ಪ, ರಮೇಶ, ಮಲ್ಲಿಕಾರ್ಜುನ ನಾಡಗೌಡ ಸೇರಿ ಇತರರು ಇದ್ದರು.

