ನರಕಲದಿನ್ನಿ ಗ್ರಾ.ಪಂ. ಕಾರ್ಯದರ್ಶಿ ವರ್ಗಾವಣೆ ರದ್ದು ಮಾಡಲು ಒತ್ತಾಯ
ಲಿಂಗಸುಗೂರು : ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರೇಮಾ ಇವರ ವರ್ಗಾವಣೆ ರದ್ದು ಮಾಡುವಂತೆ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಪಂಚಾಯತ್ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಮೇ 4ರಂದು ಬಸವರಾಜ ರೋಡಲಬಂಡಾ (ಯುಕೆಪಿ) ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ನರಕಲದಿನ್ನಿ ಗ್ರಾಮ ಪಂಚಾಯತ್‍ಗೆ ಹೆಚ್ಚುವರಿಯಾಗಿ ನೇಮಕ ಮಾಡಿ ಜಿ.ಪಂ. ಸಿಇಒ ಆದೇಶ ಮಾಡಿದ್ದರು. ಅಂತೆಯೇ ತಾ.ಪಂ. ಇಒ ಅವರು ಗ್ರೇಡ್-1 ಕಾರ್ಯದರ್ಶಿ ಪ್ರೇಮಾ ಅವರನ್ನು ನರಕಲದಿನ್ನಿ ಪಂಚಾಯಿತಿಗೆ ಪಿಡಿಒ ಆಗಿ ಆದೇಶ ಹೊರಡಿಸಿದ್ದಾರೆ. ಆದರೆ, ಜಿ.ಪಂ. ಸಿಇಓ ಅವರು ನೇಮಕ ಮಾಡಿರುವ ಬಸವರಾಜರನ್ನೇ ನರಕಲದಿನ್ನಿ ಪಂಚಾಯಿತಿಗೆ ಕರ್ತವ್ಯಕ್ಕೆ ಮುಂದುವರೆಸಬೇಕು. ಪ್ರೇಮಾ ಅವರ ವರ್ಗಾವಣೆಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಮಹಾಂತೇಶ, ಹುಲುಗಪ್ಪ ಪೂಜಾರಿ, ಯಮನಪ್ಪ, ಮಲ್ಲನಗೌಡ ಸೇರಿ ಇತರರು ಇದ್ದರು.

