ಲಿಂಗಸುಗೂರು ಈಗ ಸ್ಥಳೀಯ ಯೋಜನಾ ಪ್ರದೇಶ : ಅಧಿಸೂಚನೆ
ಲಿಂಗಸುಗೂರು : ಹಾಲಿ ಪುರಸಭೆಯ ವ್ಯಾಪ್ತಿಯ ಜೊತೆಗೆ ಯಲಗಲದಿನ್ನಿ ಗ್ರಾಮವನ್ನು ಸೇರ್ಪಡಿಸಿ ಲಿಂಗಸುಗೂರು ಪಟ್ಟಣವನ್ನು ಸ್ಥಳೀಯ ಯೋಜನಾ ಪ್ರದೇಶವೆಂದು ಇಂದಿನಿಂದಲೇ (ಮೇ 25) ಜಾರಿಗೆ ಬರುವಂತೆ ಸರಕಾರ ಘೋಷಣೆ ಮಾಡಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಲತಾ ಕೆ. ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ, ಪ್ರಸ್ತುತ ಇರುವ ಪುರಸಭೆಯ ವ್ಯಾಪ್ತಿಯ ಜೊತೆಗೆ ಯಲಗಲದಿನ್ನಿ ಗ್ರಾಮವನ್ನು ಸೇರ್ಪಡೆಗೊಳಿಸಿ ಸ್ಥಳೀಯ ಯೋಜನಾ ಪ್ರದೇಶವೆಂದು ಸರಕಾರ ಘೊಷಣೆ ಮಾಡಿದ್ದರಿಂದ ಲಿಂಗಸುಗೂರು ಪಟ್ಟಣಕ್ಕೆ ಪ್ರತ್ಯೇಕವಾಗಿ ಯೋಜನಾ ಪ್ರಾಧಿಕಾರವನ್ನು ರಚಿಸಲು ಆದೇಶಿಸಿದ್ದಾರೆ.
ಸರಕಾರದಿಂದ ನೇಮಿಸಲ್ಪಡುವ ಅದ್ಯಕ್ಷರು, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೆಶಕರು ರಾಯಚೂರು ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ, ಸರಕಾರದಿಂದ ನೇಮಿಸಲ್ಪಡುವ ಮೂರು ಜನ ಅಧಿಕಾರೇತರ ಸದಸ್ಯರು ಯೋಜನಾ ಪ್ರಾಧಿಕಾರದ ಸಮಿತಿಯಲ್ಲಿ ಇರಲಿದ್ದಾರೆಂದು ತಿಳಿಸಿದ್ದಾರೆ.

