ಸಾರಿಗೆ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಲಿಂಗಸುಗೂರು : ಗ್ರಾಮೀಣ ಪ್ರದೇಶದಿಂದ ತಾಲೂಕು ಕೇಂದ್ರಕ್ಕೆ ಶಾಲಾ-ಕಾಲೇಜು ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್‍ಗಳಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದು, ಶಾಲಾ-ಕಾಲೇಜು ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತಾಲೂಕಿನ ಗುಡ್ಡಗಾಡು ಪ್ರದೇಶದ ಶಿಲಹಳ್ಳಿ, ಯರಗೋಡಿ, ಹಂಚಿನಾಳ, ಗೋರೆಬಾಳ ಗ್ರಾಮದ ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‍ಗಳು ಬರುತ್ತಿಲ್ಲ. ಇದರಿಂದ ವಿದ್ಯಾಭ್ಯಾಸದಲ್ಲಿ ಅಡಚಣೆಯಾಗುತ್ತಿದೆ. ಕೂಡಲೇ ಘಟಕ ವ್ಯವಸ್ಥಾಪಕರು ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ, ಈ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಪರಿಣಾಮ ಹೆಚ್ಚುವರಿ ಬಸ್‍ನ ವ್ಯವಸ್ಥೆ ಮಾಡಬೇಕೆಂದೂ ಒತ್ತಾಯಿಸಿದರು.
ಅಶೋಕ, ಶಶಿಕುಮಾರ, ವೆಂಕಟೇಶ, ಸಿದ್ದು, ವಿಷ್ಣು, ಮಂಜುನಾಥ, ಬಸವರಾಜ, ಯಲ್ಲಪ್ಪ, ಆದಣ್ಣ, ಯಲ್ಲಪ್ಪ, ದುರುಗಪ್ಪ, ಶರಣಗೌಡ, ಅಮರೇಶ, ತಿರುಪತಿ, ಮಲ್ಲಿಕಾರ್ಜುನ, ಗಂಗಾಧರ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

