ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ : ಸದ್ಬಳಕೆಗೆ ಕರೆ
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮದ ಶ್ರೀ ಅಮರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದೇವರೆಡ್ಡಿ ಮೇಟಿ ಅಟಲ್ ಟಿಂಕರಿಂಗ್ ಲ್ಯಾಬನ್ನು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಕ್ಷಣದಲ್ಲಿ ಗುಣಾತ್ಮಕ, ಸಂಶೋಧನಾತ್ಮಕ ಹಾಗೂ ಕೌಶಲ್ಯಯುಕ್ತ ತರಬೇತಿ ನೀಡಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆ ಇದಾಗಿದ್ದು, 2018-19ನೇ ಸಾಲಿಗೆ 12 ಲಕ್ಷ ರೂಪಾಯಿ ಮೊತ್ತದ ಲ್ಯಾಬ್ ಸಿದ್ಧಪಡಿಸಲು ಅನುದಾನ ಬಿಡುಗಡೆಯಾಗಿದೆ. ನಿಯಮಾನುಸಾರ ಲ್ಯಾಬ್ ಸಿದ್ಧಪಡಿಸಲಾಗಿದ್ದು, ಶಿಕ್ಷಕರು ಸದುಪಯೋಗ ಪಡೆದುಕೊಳ್ಳುವ ಮೂಲಕ ಮಕ್ಕಳಿಗೆ ಇದರ ಸಂಪೂರ್ಣ ಲಾಭವಾಗುವಂತೆ ಅನುಷ್ಠಾನಗೊಳಿಸಬೇಕೆಂದು ಹೇಳಿದರು.
ಪ್ರಾಚಾರ್ಯರಾದ ಸುಷ್ಮಾ ಮೇಟಿ, ಎಡುಲೈಪ್ ಮುಖ್ಯಸ್ಥ ಅಭಯ್‍ಸಿಂಗ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

