ರಾಯಚೂರು

ವಿಧ್ಯೆಯೊಂದಿಗೆ ಬದುಕು ರೂಪಿಸಿಕೊಳ್ಳಲು ಗುಲಬರ್ಗಾ ವಿವಿ ಕುಲಪತಿ ಕರೆ

ಲಿಂಗಸುಗೂರು : ವಿದ್ಯಾರ್ಥಿಗಳು ಕೇವಲ ಓದಲಿಕ್ಕೆಂದು ಕಾಲೇಜಿಗೆ ಬರುವ ಬದಲು, ವಿದ್ಯೆಯೊಂದಿಗೆ ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿಧ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್
ಕರೆ ನೀಡಿದರು.

ಸ್ಥಳೀಯ ವಿ.ಸಿ.ಬಿ. ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ನೂತನ ಗ್ರಂಥಾಲಯ ಕಟ್ಟಡ, ಸ್ನಾತಕೋತ್ತರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಲಬರ್ಗಾ ವಿವಿ ಹುಟ್ಟಿ ಪ್ರಸಕ್ತ ಸಾಲಿಗೆ ನಲವತ್ತು ವರ್ಷಗಳಾಗಿವೆ. ಪ್ರಾಧ್ಯಾಪಕರೊಬ್ಬರು 40 ವರ್ಷಗಳಲ್ಲಿ ಕುಲಪತಿಗಳಾಗಿರುವುದು ಇತಿಹಾಸವಾಗಿದೆ. ಈ ವಿವಿ ಅಧೀನದಲ್ಲಿ 562 ಮಹಾವಿದ್ಯಾಲಯಗಳಿವೆ. ಈ ಮಹಾವಿಧ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ
ದೊರಕಿದಾಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ. ಜೊತೆಗೆ ವಿದ್ಯಾರ್ಥಿಗಳೂ ಕಠಿಣ ಪರಿಶ್ರಮದಿಂದ ಜೀವನ ರೂಪಿಸಿಕೊಳ್ಳಲು ವಿಧ್ಯೆ ಎನ್ನುವ ರಹದಾರಿಯಲ್ಲಿ ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಮುನ್ನಡೆದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀಬಸವ ಸ್ವಾಮಿಗಳು, ವಿಸಿಬಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಹಂಪನಗೌಡ ಬಾದರ್ಲಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಜಗದೀಶ, ಪ್ರಭುಕುಮಾರ ನಾಡಗೌಡ, ಚಂದ್ರಶೇಖರ ಪಾಟೀಲ್,ವೈವೈ ಈಳಿಗೇರ್, ಪ್ರೊ.ಜಿವಿ ಕೆಂಚನಗುಡ್ಡ ಸೇರಿ ಇತರರು ಸಮಾರಂಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!