ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ
ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪದಾಧಿಕಾರಿಗಳು ಶಾಸಕರ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಶಾಸಕ ಡಿ.ಎಸ್.ಹೂಲಗೇರಿಯವರಿಗೆ ಮನವಿ ಸಲ್ಲಿಸಿದರು.
ನೂತನ ಶಿಕ್ಷಣ ನೀತಿ 2020ಅನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಪಡಿಸಿ ಈಗಿರುವ ಮಾದರಿಯನ್ನು ಮುಂದುವರೆಸಬೇಕು. ಬಿಡಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ ಎಲ್.ಐ.ಸಿ. ಆಧಾರಿತ ಪಿಂಚಣಿ ನಿಗದಿ ಮಾಡಬೇಕು. 60 ವರ್ಷ ವಯಸ್ಸಿನ ನೆಪವೊಡ್ಡಿ ಅಡುಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು.
ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ನರೇಗಾ ಯೋಜನೆ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಿ ಕನಿಷ್ಠ ಕೂಲಿ 600 ರೂಪಾಯಿ ಹೆಚ್ಚಿಸಿ ಎಲ್ಲರಿಗೂ ನರೇಗಾ ಕೆಲಸ ಕೊಡಬೇಕು. ರಾಜ್ಯ ವಿಧಾನಸಭೆಯ ಬಜೆಟ್‍ನಲ್ಲಿ ರೈತ, ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಸಂಘಟಿತ-ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ಒತ್ತಾಯಿಸಿದರು.
ಎಸ್‍ಎಫ್‍ಐ ಜಿಲ್ಲಾದ್ಯಕ್ಷ ರಮೇಶ ವೀರಾಪೂರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಹನೀಫ್, ನಾಗರತ್ನಾ ಸಂತೆಕೆಲ್ಲೂರು,ಶೈನಾಜ್‍ಬಾನು, ಮಲ್ಲಮ್ಮ ಯಲಗಲದಿನ್ನಿ, ಸುಮಂಗಲಾ, ಶಿವು ಕಪಗಲ್,ಮುಮತಾಜ್, ಚನ್ನಬಸವ ಕೋಠ, ಶರಣಬಸವ ಹೊನ್ನಹಳ್ಳಿ ಸೇರಿ ಇತರರು
ಈ ಸಂದರ್ಭದಲ್ಲಿ ಇದ್ದರು.

