ಲಿಂಗಸುಗೂರು : ಉಚಿತ ದಂತ ತಪಸಣಾ ಚಿಕಿತ್ಸಾ ಶಿಬಿರ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಓರಲ್ಹೆ ಲ್ತ್ ಪಾಲಿಸಿ ಹಾಗೂ ದಂತ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರಕ್ಕೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಉದ್ಘಾಟಿಸಿದರು.
ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಫ್ಲೋರೈಡ್ ಇರುವ ಪೇಸ್ಟ್ಬಳಸಿ ಬ್ರಶ್ ಮಾಡಬೇಕು. ಪೌಷ್ಠಿಕ ಆಹಾರವನ್ನು ಸೇವನೆ ಮಾಡಬೇಕು. ಊಟ ಮಾಡುವಾಗ ಮಧ್ಯದಲ್ಲಿ ಸಿಹಿ ತಿಂಡಿ, ಪದಾರ್ಥಗಳನ್ನು ಸೇವನೆ ಮಾಡಬಾರದು. ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಬೇಕು. ಡೆಂಟಲ್ ಪ್ಲಾಸ್ ಹಾಗೂ ಮೌತ್‍ವಾಶ್‍ಗಳನ್ನು ಬಳಕೆ ಮಾಡುವ ಮೂಲಕ ದಂತಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಜನರು ಕಾಳಜಿ ವಹಿಸಬೇಕು. ಅಲ್ಲದೇ, ದಂತ ಭಾಗ್ಯ ಯೋಜನೆಯಡಿ
ಮೂರು ಅಥವಾ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡವರಿಗೆ ದಂತ ಪಂಕ್ತಿಯನ್ನು ಸಂಪೂರ್ಣ ಹಲ್ಲುಗಳನ್ನು ಕಳೆದುಕೊಂಡವರಿಗೆ ಪೂರ್ಣ ದಂತ ಪಂಕ್ತಿಯನ್ನು ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು
ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವೈದ್ಯರು ಕರೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್, ದಂತ ಆರೋಗ್ಯಾಧಿಕಾರಿಗಳಾದ ಡಾ.ಶೋಭಾ ನಾಯಕ್, ಡಾ.ಪುಷ್ಪಾವತಿ,ಆರೋಗ್ಯ ಇಲಾಖೆಯ ಪ್ರಾಣೇಶ್ ಜ್ಯೋಶಿ, ನಾಗರಾಜ, ರವಿ ಬಳಿಗಾರ,ಅಮರೇಶ, ರಾಜಶೇಖರ ಸೇರಿ ಆಶಾ ಕಾರ್ಯಕರ್ತೆಯರು ಹಾಗೂಫಲಾನುಭವಿಗಳು ಶಿಬಿರದಲ್ಲಿ ಇದ್ದರು.

