ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ : ಕ್ರಮಕ್ಕೆ ಆಗ್ರಹ
ಲಿಂಗಸುಗೂರು : ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಆಗ್ರಹಿಸಿದರು.
ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿಗೆ ಮನವಿ ಸಲ್ಲಿಸಿದ ಅವರು,ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತುಇಂಜಿನೀಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ಧೇಶದಿಂದ ಸಿಇಟಿ ಪರೀಕ್ಷೆ ಜಾರಿಗೆ ತರಲಾಗಿದೆ. ಇದೀಗ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯನ್ನು
ಸಾಕ್ಷಿ ಸಮೇತ ಐಟಿ ಅಧಿಕಾರಿಗಳು
ಬಯಲಿಗೆ ಎಳೆದಿದ್ದಾರೆ.
ವೈದ್ಯಕೀಯ ಸೀಟುಗಳ ಮಾರಾಟದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜತೆಗೆ ಆದಾಯ ತೆರಿಗೆ ಇಲಾಖೆ ಕಾಯ್ದೆಯೂ ಕೂಡ ಉಲ್ಲಂಘನೆಯಾಗಿದೆ. ಕೂಡಲೇ ಸೀಟುಗಳಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ಧ ಸರಕಾರ ಒತ್ತಡಗಳಿಗೆ
ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ಜಗದೀಶ ದೊಡ್ಡಮನಿ,
ಸಹಕಾರ್ಯದರ್ಶಿ ಮೌನೇಶ, ಪ್ರಸಾದ, ಗಣೇಶ, ಅಮರೇಗೌಡ, ಪ್ರವೀಣ,ಬಸವರಾಜ, ಎಂ.ಡಿ.ಶರೀಫ, ಗೋಪಾಲ, ನಿಖಿತಾ, ಅಕ್ಕಮ್ಮ, ಸುಗಂಧ, ದೀಪಾ,ಲಕ್ಷ್ಮೀ, ವಿಜಯಲಕ್ಷ್ಮೀ,ಸ್ವಪ್ನ,ಭಾವನಾ,ಪ್ರಿಯಾಂಕ,ಹುಲಿಗೆಮ್ಮ,ಸರಸ್ವತಿ, ಸುನಿತಾ ಸೇರಿದಂತೆ ಇತರರು ಇದ್ದರು.

