ಶಾಸಕಿ ಪೂರ್ಣಿಮಾರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಲಿಂಗಸುಗೂರು : ಯಾದವ ಸಮಾಜದ ಹಿರಿಯೂರು ಕ್ಷೇತ್ರದ
ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಂಪುಟದರ್ಜೆಯ ಸಚಿವ ಸ್ಥಾನ ನೀಡುವಂತೆ ಯಾದವ ಸಮಾಜದ ಮುಖಂಡರು ಆಗ್ರಹಿಸಿದರು.
ಶಿರಸ್ತೆದಾರ ಶಾಲಂಸಾಬರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಹಿಂದುಳಿದ ಯಾದವ ಸಮಾಜವನ್ನು ಪ್ರತಿನಿಧಿಸುವ ಏಕೈಕ ಶಾಸಕಿಯಾಗಿರುವ ಪೂರ್ಣಿಮಾ ಅವರ ಸೇವೆಯನ್ನು ಪರಿಗಣಿಸಿ ಸಮಾಜಕ್ಕೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖಂಡರು ಒತ್ತಾಯಿಸಿದರು.
ಯಾದವ ಸಮಾಜದ ಅದ್ಯಕ್ಷ ಪರಮೇಶ ಯಾದವ್,
ಮುಖಂಡರಾದ ಭೀಮಣ್ಣ ಟೈಲರ್, ನಾಗರಾಜ, ಕರಿಯಪ್ಪ, ಭೀಮಣ್ಣ ಹುಲಿಗಿ,ಗಂಗಪ್ಪ ಮುದಗಲ್ ಸೇರಿ ಇತರರು ಇದ್ದರು.

