ಬಡ ಕುಟುಂಬಗಳಿಗೆ ಫುಡ್‍ಕಿಟ್ ವಿತರಣೆ
ಲಿಂಗಸುಗೂರು : ಸ್ಥಳೀಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ಪಟ್ಟಣದ 10 ಬಡ ಕುಟುಂಬಗಳಿಗೆ ಫುಡ್‍ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಜೆಡಿಎಸ್ ಯುವ ಘಟಕದ ಅದ್ಯಕ್ಷ ಇಮ್ತೆಯಾಜ್‍ಪಾಷಾ ಫುಡ್‍ಕಿಟ್ ವಿತರಣೆ ಮಾಡಿ, ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಇದೇ ರೀತಿ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳವರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಆಂತರಿಕ ಲೆಕ್ಕಪರಿಶೋಧಕ ಘನರಾಜ್, ಮೇಲ್ವಿಚಾರಕಿ ನಳಿನಿ, ಶೋಭಾ, ರೋಷನ್ ಸೇರಿ ಇತರರು ಇದ್ದರು.

