ಲಿಂಗಸುಗೂರು : ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ
ಲಿಂಗಸುಗೂರು : ಪಟ್ಟಣದ ಬೀದಿಬದಿಯ ವ್ಯಾಪಾರಿಗಳಿಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ಮಾಸ್ಕ್‍ಗಳನ್ನು ವಿತರಣೆ ಮಾಡಲಾಯಿತು. ಬೀದಿಬದಿ ವ್ಯಾಪಾರಿಗಳ
ಸಂಘದ ಅದ್ಯಕ್ಷ ಮಹೆಬೂಬಪಾಷಾ ಮಾಸ್ಕ್‍ಗಳನ್ನು ವಿತರಿಸಿದರು.
ಕೋವಿಡ್ ಅಲೆ ಸಂಪೂರ್ಣವಾಗಿ ಹೋಗುವವರೆಗೂ ವ್ಯಾಪಾರಿಗಳು ಎಚ್ಚರಿಕೆಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ವ್ಯಾಪಾರ ಮಾಡಬೇಕು. ಮಾಸ್ಕ, ಸ್ಯಾನಿಟೈಜರ್ ಸೇರಿ ಸುರಕ್ಷತೆಯಿಂದ ಸಾಮಾಜಿಕ
ಅಂತರ ಕಾಯ್ದುಕೊಳ್ಳುವ ಮೂಲಕ ಸರಕಾರದ ನಿಯಮಗಳನ್ನುಕಾಲಕಾಲಕ್ಕೆ ಪಾಲನೆ ಮಾಡಬೇಕೆಂದು ವ್ಯಾಪಾರಿಗಳಿಗೆ ಮಹೆಬೂಬಪಾಷಾ ಕಿವಿಮಾತು ಹೇಳಿದರು.
ಫೌಂಡೇಷನ್‍ನ ಮಂಜುನಾಥ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

