ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಪೂರ್ವಭಾವಿ ಸಭೆ ಕಾರ್ಯಕರ್ತರು ಒಗ್ಗಟ್ಟಾಗಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ವಜ್ಜಲ್ ಕರೆ
ಲಿಂಗಸುಗೂರು : ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳ ಪರವಾಗಿ ನಮ್ಮ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕೆಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಕರೆ ನೀಡಿದರು.
ತಾಲೂಕಿನ ಆನೆಹೊಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರೋಡಲಬಂಡಾ(ಯುಕೆಪಿ) ಸಸ್ಯಪಾಲನಾ ಕೇಂದ್ರದ ಆವರಣದಲ್ಲಿ ಚುನಾವಣೆಗಳ ನಿಮಿತ್ಯ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಟಿತಗೊಂಡಿದೆ. ಬರುವ ದಿನಗಳಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಬೇಕಿದೆ. ಈ ಕಾರ್ಯಕ್ಕೆ ಕಾರ್ಯಕರ್ತರು, ಮುಖಂಡರು ಹಗಲಿರುಳೂ ಶ್ರಮಿಸಬೇಕೆಂದು ಕರೆ ನೀಡಿದರು.
ಪಕ್ಷದ ಅದ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ನಾಗಪ್ಪ ವಜ್ಜಲ್, ಹನುಮಂತಪ್ಪ ತೊಗರಿ, ಗಿರಿಮಲ್ಲನಗೌಡ ಪಾಟೀಲ್, ಡಾ.ಶಿವಬಸಪ್ಪ ಹೆಸರೂರು, ಜೀವಲೆಪ್ಪ ನಾಯ್ಕ, ಡಿಜಿ ಗುರಿಕಾರ, ರುದ್ರಗೌಡ ಪಾಟೀಲ್, ಚಂದ್ರಶೇಖರಗೌಡ ಪಾಟೀಲ್, ನಾರಾಯಣಪ್ಪ ರಾಠೋಡ್, ಗೋವಿಂದ ನಾಯಕ, ಶಂಕರಗೌಡ ಬಳಗಾನೂರು, ವೆಂಕನಗೌಡ ಪಾಟೀಲ್, ಪರಮೇಶ ಯಾದವ್, ಜಗನ್ನಾಥ ಕುಲಕರ್ಣಿ, ಬಂದೇನವಾಜ್ ಆನೆಹೊಸೂರು ಸೇರಿ ಇತರರು ಇದ್ದರು.

