ರಾಯಚೂರು

ಲಿಂಗಸುಗೂರು : ಪತ್ರಕರ್ತರಿಗೆ ಎರಡನೇ ಹಂತದ ಕೋವಿಡ್ ಲಸಿಕೆ

ಲಿಂಗಸುಗೂರು : ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಎರಡನೇ ಹಂತದ ಕೋವಿಡ್ ಲಸಿಕೆಯನ್ನು ಹಾಕಲಾಯಿತು.


ಬಹುತೇಕ ಪತ್ರಕರ್ತರು ಕಳೆದ ಮೂರು ತಿಂಗಳ ಹಿಂದೆ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರು. ಎರಡನೇ ಹಂತದ ಲಸಿಕೆಯನ್ನು ಮಂಗಳವಾರ ಪಡೆಯಲಾಯಿತು. ಮೊದಲ ಬಾರಿಗೆ ಲಸಿಕೆ ಪಡೆದುಕೊಳ್ಳದವರು ಪ್ರಥಮ ಲಸಿಕೆ ಹಾಕಿಸಿಕೊಂಡರು. ಪತ್ರಕರ್ತರ ಜೊತೆಗೆ ಅವರ ಕುಟುಂಬಸ್ಥರೂ ಲಸಿಕೆ ಪಡೆದರು.


ಪತ್ರಕರ್ತರ ಸಂಘದ ಜಿಲ್ಲಾ ಉಪಾದ್ಯಕ್ಷ ರಾಘವೇಂದ್ರ ಗುಮಾಸ್ತೆ, ಅದ್ಯಕ್ಷ ಶಿವರಾಜ ಕೆಂಭಾವಿ, ಪ್ರಧಾನ ಕಾರ್ಯದರ್ಶಿ ಗುರುರಾಜ ಗೌಡೂರು, ಪತ್ರಕರ್ತರಾದ ಖಾಜಾಹುಸೇನ್, ನಾಗರಾಜ ಗೊರೆಬಾಳ, ಅಮರೇಶ ಬಲ್ಲಟಗಿ, ಅಮರಯ್ಯ ಘಂಟಿ, ರಾಘವೇಂದ್ರ ಭಜಂತ್ರಿ, ಹನುಮಂತ ಕನ್ನಾಳ, ಪಂಪಾಪತಿ, ಬಸಲಿಂಗಪ್ಪ ಭಜಂತ್ರಿ, ರವಿಕುಮಾರ ಹೊಸಮನಿ, ಬಸವರಾಜ, ಗೌತಮ್, ಶಿವಪ್ಪ ಹಟ್ಟಿ, ಸುನಿಲಕುಮಾರ ಹಟ್ಟಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!