ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು : ವಜ್ಜಲ್
ಲಿಂಗಸುಗೂರು : ಪ್ರಸ್ತುತ ದಿನಮಾನದಲ್ಲಿ ಪರಿಸರ ಸಂರಕ್ಷಣೆ, ಕಾಳಜಿಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಕರೆ ನೀಡಿದರು.
ಪಟ್ಟಣದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಸ್ವಚ್ಛ ಗಾಳಿ ಮನುಷ್ಯನ ಸದೃಢ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮನೆಗೊಂದು ಸಸಿ ನೆಡುವ ಮೂಲಕ ಸಾರ್ವಜನಿಕರು ಪರಿಸರ ಕಾಳಜಿ ವಹಿಸಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ್, ಮುಖಂಡರಾದ ಗಿರಿಮಲ್ಲನಗೌಡ, ಶಿವ ಪ್ರಕಾಶ, ವೆಂಕನಗೌಡ ಐದನಾಳ, ಮದನ ಮೋಹನ, ಕಲ್ಲಪ್ಪಗೌಡ ದೆವರಮನಿ, ಶೋಭಾ ಕಾಟವ, ಜ್ಯೋತಿ ಸುಂಕದ, ಸ್ಮೀತಾ ಅಂಗಡಿ ಸೇರಿ ಇತರರು ಇದ್ದರು.

