ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ
ಲಿಂಗಸುಗೂರು : ಸಂಘಟನೆಯ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.
ಶಿರಸ್ತೆದಾರ ಶಾಲಂಸಾಬರಿಗೆ ಮನವಿ ಸಲ್ಲಿಸಿದ ಅವರು, ಪ್ರತಿ ಬಿಸಿಯೂಟ ನೌಕರರಿಗೆ ಹಾಗೂ ಅವರ ಕುಟುಂಗಳಿಗೆ ಲಸಿಕೆ ನೀಡಿ, ಜೀವ ಉಳಿಸಬೇಕು. ಕೊರೊನಾದಿಂದ ಮರಣ ಹೊಂದಿದ ಬಿಸಿಯೂಟ ನೌಕರರಿಗೆ ಪರಿಹಾರ ನೀಡಬೇಕು. 2021-22ರ ಬಜೆಟ್‍ನಲ್ಲಿ ಕಡಿತವಾಗಿರುವ 1400 ಕೋಟಿ ರೂಪಾಯಿ ಅನುದಾನ ವಾಪಸ್ ಕೊಡಬೇಕು ಮತ್ತು ಬಜೆಟ್‍ನಲ್ಲಿ ಅನುದಾನ ಹೆಚ್ಚಿಸಬೇಕು. ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಪರಿಸಿ ಈಗಿರುವ ಮಾದರಿಯನ್ನು ಮುಂದುವರೆಸಬೇಕು. ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ ಎಲ್.ಐ.ಸಿ. ಆಧಾರಿತ ಪಿಂಚಣಿ ನಿಗದಿ ಮಾಡಬೇಕು. ಈ ಪಿಂಚಣಿ ನಿಗದಿ ಆಗುವವರೆಗೂ ಕೂಡಲೇ ಬಿಡುಗಡೆ ಮಾಡಬೇಕಾದ ನೌಕರರಿಗೆ 1 ಲಕ್ಷ 50 ಸಾವಿರ ರೂಪಾಯಿ ಇಡಿಗಂಟೆ ಬಿಡುಗಡೆ ಮಾಡಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘಟನೆ ಅದ್ಯಕ್ಷ ಮಹ್ಮದ್ ಹನೀಫ್, ಕಾರ್ಯದರ್ಶಿ ನಾಗರತ್ನ, ಸದ್ದಾಂಹುಸೇನ್, ಬಾಬಾಜಾನಿ, ಶೈಜಾನ್‍ಬೇಗಂ, ಲಿಂಗಮ್ಮ, ಬಾನುಬೇಗಂ, ಸಬಾ ಫಾತೀಮಾ, ಸುಮಿತ್ರಬಾಯಿ ಸೇರಿ ಇತರರು ಇದ್ದರು.

