ರಾಯಚೂರು

91 ಗ್ರಾಮ ಪಂಚಾಯತ್‌ಗಳಿಗೆ ಮೊದಲನೇ ಹಂತದ ಚುನಾವಣೆ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ- ಆರ್. ವೆಂಕಟೇಶ ಕುಮಾರ್


ರಾಯಚೂರು,ಡಿ.೨೧:- ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಡಿ.೨೨ರ ಮಂಗಳವಾರ ಮೊದಲನೇ ಹಂತದಲ್ಲಿ ೯೧ ಗ್ರಾಮ ಪಂಚಾಯತ್‌ಗಳ ೧,೨೯೩ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಚುನಾವಣೆಯನ್ನು ಶಾಂತಿ ಸುವ್ಯವಸ್ಥೆಯಿಂದ ನಿರ್ವಹಿಸಲು ಈಗಾಗಲೇ ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.


ಅವರು ಡಿ.೨೧ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದರು.
ಡಿ.೨೨ರಂದು ಮೊದಲ ಹಂತದ ಚುನಾವಣೆಯಲ್ಲಿ ೯೧ ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯಲಿದ್ದು, ರಾಯಚೂರು, ದೇವದುರ್ಗ, ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಮತದಾನ ನಡೆಯಲಿದೆ. ೮೭೩ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ೫,೯೧,೦೨೭ ಮತದಾರರು ಮತ ಚಲಾಯಿಸಿಲಿದ್ದಾರೆ. ೭೭ ಅತಿಸೂಕ್ಷ್ಮ, ೧೫೭ ಸೂಕ್ಷ್ಮ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ೪೦ ಸೆಕ್ಟರ್ ಅಧಿಕಾರಿಗಳು ನೇಮಕ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಲು ೪ ತಂಡ ರಚಿಸಲಾಗಿದೆ ಎಂದರು.


೧೩೬ ಪಿಆರ್‌ಓ, ೧೩೬ ಎಪಿಆರ್‌ಓ ಹಾಗೂ ೨,೦೭೨ ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಸಾರಿಗೆ, ಖಾಸಗಿ ಬಸ್ ಹಾಗೂ ಜೀಪ್ ಸೇರಿ ಒಟ್ಟು ೨೮೬ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆ ಕೇಂದ್ರಕ್ಕೆ ೧ ಪೇದೆ, ಅತಿಸೂಕ್ಷ್ಮ ಕೇಂದ್ರಕ್ಕೆ ೨ ಪೇದೆಗಳು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಕೋವಿಡ್-೧೯ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆ ಕೇಂದ್ರಗಳಿಗೆ ಕೋವಿಡ್ ಕಿಟ್, ಸ್ಯಾನಿಟೈಜೇಷನ್, ಹ್ಯಾಂಡ್ ಗ್ಲೌಸ್, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ವಿತರಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮತ ಚಲಾಯಿಸಬೇಕು. ಕಾನೂನು ಬಾಹೀರವಾಗಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಿದ್ದಲ್ಲಿ ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!