ಎಪಿಎಂಸಿ ಮಾರುಕಟ್ಟೆ ಬಂದ್ : ಶುಲ್ಕ ಶೇ.35 ಪೈಸೆಗೆ ಆದೇಶಿಸಲು ಒತ್ತಾಯ
ಲಿಂಗಸುಗೂರು : ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕ ಶೇ 35 ಪೈಸೆಗೆ ಪುನಃ ಆದೇಶಿಸಬೇಕೆಂದು ಎಪಿಎಂಸಿ ವರ್ತಕರು ಮಾರುಕಟ್ಟೆಯನ್ನು ಬಂದ್ ಮಾಡಿ ಒತ್ತಾಯಿಸಿದರು.
ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿಗೆ ಮನವಿ ಸಲ್ಲಿಸಿದ ಅವರು, ಮಾರುಕಟ್ಟೆ ಶುಲ್ಕ ವಿರೋಧಿಸಿ ಎಪಿಎಂಸಿ ವಹಿವಾಟು ಬಂದ್ ಮಾಡಿದಾಗ ಸರ್ಕಾರ ಮಾರುಕಟ್ಟೆ ಶುಲ್ಕ 1 ರೂ. ಇದ್ದುದನ್ನು ಶೇ. 35 ಪೈಸೆಗೆ ನಿಗದಿಪಡಿಸಿ ಆದೇಶ ನೀಡಿದಾಗ ವರ್ತಕರಿಗೆ ಅನುಕೂಲವಾಗಿತ್ತು. ಆದರೆ ಡಿ.10 ರಂದು ಏಕಾಏಕಿ ಶೇ. 1 ರೂ.ಗೆ ಶುಲ್ಕ ಏರಿಕೆ ಮಾಡಿರುವುದು ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿದೆ.
ಕಳೆದ 6 ತಿಂಗಳಲ್ಲಿ ಮಾರುಕಟ್ಟೆ ಶುಲ್ಕ ಹೆಚ್ಚಿಸಿ ವ್ಯಾಪಾರಸ್ಥರಲ್ಲಿ ನಿರಾಶೆ ಮೂಡಿಸಿದೆ. ಕಾರಣ ಮೊದಲು ಪರಿಷ್ಕರಿಸಿದ ಆದೇಶದಂತೆ ಪುನಃ ಶೇ. 35 ಪೈಸೆಯಂತೆ ನಿಗದಿಪಡಿಸಿ ಗೆಜೆಟ್‍ನಲ್ಲಿ ಆದೇಶ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಲಿಂಗಸುಗೂರು, ಮುದಗಲ್ ಎಪಿಎಂಸಿ ವರ್ತಕರು ಈ ಸಂದರ್ಭದಲ್ಲಿ ಇದ್ದರು.

