ಆಡಳಿತ ಮಂಡಳಿಗೆ ಸ್ಪಂಧಿಸದ ಮುಖ್ಯಾಧಿಕಾರಿ : ಶಾಸಕರ ತರಾಟೆ
ಲಿಂಗಸುಗೂರು : ಆಡಳಿತ ಮಂಡಳಿಯೊಂದಿಗೆ ಸ್ಪಂದಿಸದೇ ಮನಸೋಇಚ್ಛೆ ಕೆಲಸ ಮಾಡುವ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಟಿತಗೊಳ್ಳಲು ಕಾರಣರಾಗಿದ್ದಾರೆನ್ನುವ ಆರೋಪಗಳ ಹಿನ್ನೆಲೆಯಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಬುಧವಾರ ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಪುರಸಭೆ ಸಭಾಂಗಣದಲ್ಲಿ ಕಡತಗಳ ಪರಿಶೀಲನೆ ಮಾಡಿದ ಬಳಿಕ ಮುಖ್ಯಾಧಿಕಾರಿಗೆ ತರಾಟಗೆ ತೆಗೆದುಕೊಂಡ ಶಾಸಕರು, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಇಲ್ಲಾ. ಚರಂಡಿಯ ಕಲುಶಿತ ನೀರು ರಸ್ತೆಗಳಲ್ಲಿ ಹರಿದು, ವಾರ್ಡುಗಳಲ್ಲಿ ಸ್ವಚ್ಛತೆ ಇಲ್ಲ. ಶುದ್ಧೀಕರಣ ಘಟಕದಲ್ಲಿ ಮೋಟರ್ ಖರೀದಿಸುವ ವೇಳೆ ಆಡಳಿತ ಮಂಡಳಿ ಗಮನಕ್ಕೆ ತರುವುದಿಲ್ಲ. ಯಾವುದೇ ಸಭೆಗಳನ್ನು ನಡೆಸಿದರೂ ಆಡಳಿತ ಮಂಡಳಿಗೆ ಮುಂಚಿತವಾಗಿ ನೋಟಿಸ್ ಕೊಡುವುದಿಲ್ಲ.
ಖಾತಾನಕಲು, ಮೊಟೇಶನ್, ಕಟ್ಟಡ ಪರವಾನಿಗೆ ಸೇರಿ ಸಾರ್ವಜನಿಕರ ಸೇವೆಗಳನ್ನು ವಿನಾಕಾರಣ ವಿಳಂಬ ಮಾಡುತ್ತಿರುವುದು ಸೇರಿ ಹಲವಾರು ಕೆಲಸಗಳಿಂದ ಅಭಿವೃದ್ಧಿ ಕುಂಟಿತಗೊಂಡಿದೆ. ಇದರಿಂದ ಬೇಸತ್ತ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ನಮಗೆ ದೂರು ಸಲ್ಲಿಸುತ್ತಿದ್ದಾರೆ. ನಿಮಗೆ ಇಷ್ಟವಿದ್ದರೆ, ಇಲ್ಲಿ ಕೆಲಸ ಮಾಡಿ ಇಲ್ಲದಿದ್ದರೆ ಅಧಿಕಾರಿಗಳು ಇಲ್ಲಿಂದ ಹೋಗಬಹುದೆಂದು ತರಾಟೆಗೆ ತೆಗೆದುಕೊಂಡ ಶಾಸಕರು, ಯಾವುದೇ ಕುಂಟು ನೆಪಗಳನ್ನು ಹೇಳದೇ ಬರುವ 15 ದಿನಗಳಲ್ಲಿ ಎಲ್ಲಾ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಸೂಚನೆ ನೀಡಿದರು.
ನಾನೊಬ್ಬಳೇ ಎಲ್ಲಾ ಕೆಲಸ ಮಾಡಲು ಆಗುವುದಿಲ್ಲ. ಸದಸ್ಯರೂ ನನ್ನೊಂದಿಗೆ ಕೈಜೋಡಿಸಬೇಕು. ನಿಯಮಾನುಸಾರ ನಾನು ಸರಿಯಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಾನೂನು ಪ್ರಕಾರವೇ ಮುಂಚಿತವಾಗಿಯೇ ಆಡಳಿತ ಮಂಡಳಿಯ ಗಮನಕ್ಕೆ ತಂದೇ ಕೆಲಸ ಮಾಡುತ್ತಿದ್ದೇನೆ. ಬರುವ ದಿನಗಳಲ್ಲಿ ಅದ್ಯಕ್ಷ-ಉಪಾದ್ಯಕ್ಷ ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ತಂದೇ ಮುಂದುವರೆಯುತ್ತೇನೆಂದು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಗದ್ದೆಮ್ಮಾ ಭೋವಿ, ಉಪಾದ್ಯಕ್ಷ ಮೊಹ್ಮದ್‍ರಫಿ, ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದ್‍ಕುಮಾರ ಕುಲಕರ್ಣಿ, ಸದಸ್ಯರಾದ ಯಮನಪ್ಪ ದೇಗಲಮಡಿ, ಅಬ್ದುಲ್ ರೌಫ್ ಗ್ಯಾರಂಟಿ, ಮೌಲಾಸಾಬ ಸೇರಿ ಇತರರು ಇದ್ದರು

