ರಾಯಚೂರು

ಗರೀಬ್ ಕಲ್ಯಾಣ ಅನ್ನ ಯೋಜನೆ : ಕಿಟ್‍ಗಳ ವಿತರಣೆ

ಲಿಂಗಸುಗೂರು : ತಾಲೂಕಿನ ಯಲಗಲದಿನ್ನಿ ಗ್ರಾಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಗುರುವಾರ ಬಡವರಿಗೆ ಕಿಟ್‍ಗಳನ್ನು ವಿತರಣೆ ಮಾಡಿದರು.

ಬಡವರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದ್ಬಳಕೆ ಆಗಬೇಕು.

ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಸರಕಾರದ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಮುಂದಾಗಲು ಕರೆ ನೀಡಿದರು.

ಮುಖಂಡರಾದ ಗಿರಿಮಲ್ಲನಗೌಡ, ಡಾ.ಶಿವಬಸಪ್ಪ, ಗಜೇಂದ್ರ ನಾಯಕ, ಸಂಜೀವಕುಮಾರ ಕಂದಗಲ್, ಅಯ್ಯಪ್ಪ ಹೊನ್ನಹಳ್ಳಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!