ರಾಯಚೂರು

ಲಿಂಗಸುಗೂರು : ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನಾ ರ್ಯಾಲಿ



ಲಿಂಗಸುಗೂರು : ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ತಾಲೂಕು ಜೆಡಿಎಸ್ ಘಟಕದ ಕಾರ್ಯಕರ್ತರು ಮುಖಂಡ ಸಿದ್ದು ಬಂಡಿಯವರ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.


ಸ್ಥಳೀಯ ಜೆಡಿಎಸ್ ಕಚೇರಿಯಿಂದ ಬಸ್ಟಾಂಡ್ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು.


ಶಿರಸ್ತೆದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ
ಪ್ರತಿಭಟನಾಕಾರರು, ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಆರ್ಥಿಕವಾಗಿ ಜರ್ಜರಿತವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಬದುಕು ಸಾಗಿಸುವುದು
ದುಸ್ಥರವಾಗಿದೆ. ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬರಬೇಕಾದ ಸರಕಾರ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್,ಡೀಸೆಲ್, ಅನಿಲ ಸೇರಿ ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಇದರಿಂದ ಜನರ ಜೀವನ ಅಸ್ತವ್ಯಸ್ಥವಾಗುತ್ತಿದೆ.


ಕೂಲಿಕಾರ್ಮಿಕರು ದಿನದ ಊಟಕ್ಕೂ ಪರಿತಪಿಸುವಂತಾಗಿದೆ. ಕೂಡಲೇ ಪರಾಮರ್ಶಿಸಿ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡದೇ ಇದ್ದಲ್ಲಿ ದೇಶದಲ್ಲಿ
ಅರಾಜಕತೆ ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಕಟ್ಟುನಿಟ್ಟಾಗಿ ಸೂಚನೆ ನೀಡುವ ಮೂಲಕ ಬಡಜನರ ಬದುಕಿಗೆ ಮಾರಕವಾಗುತ್ತಿರುವ ಬೆಲೆ ಏರಿಕೆ ಬರೆಯನ್ನು ತಡೆಯಬೇಕೆಂದು ಆಗ್ರಹಿಸಿದರು.


ಮುಖಂಡ ಸಿದ್ದು ಬಂಡಿ, ಪುರಸಭೆ ಅದ್ಯಕ್ಷೆ ಗದ್ದೆಮ್ಮ ಭೋವಿ,
ಜೆಡಿಎಸ್ ಅದ್ಯಕ್ಷ ನಾಗಭೂಷಣ, ಯುವ ಘಟಕದ ಅದ್ಯಕ್ಷ ಇಮ್ತೆಯಾಜ್,ಮುಖಂಡರಾದ ಸಿದ್ದು ಬಡಿಗೇರ್, ಯಮನೂರು, ಬಸನಗೌಡ, ಪರಶುರಾಮ
ಕೆಂಭಾವಿ, ಹುಲುಗಪ್ಪ ನಾಯಕ, ಅನ್ವರ್‍ಪಾಷಾ, ಮುಸ್ತಫಾ, ಶಿವಪ್ಪ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯಲ್ಲಿ
ಇದ್ದರು.

Leave a Reply

Your email address will not be published. Required fields are marked *

error: Content is protected !!