ರಾಯಚೂರು

ತಾಂತ್ರಿಕ ಶಿಕ್ಷಣದ ಸದುಪಯೋಗಕ್ಕೆ ಶಾಸಕ ಹೂಲಗೇರಿ ಕರೆ

ಲಿಂಗಸುಗೂರು : ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಡಿ.ಎಸ್.ಹೂಲಗೇರಿ ಕರೆ ನೀಡಿದರು.


ಸ್ಥಳೀಯ ಸರಕಾರಿ ತೋಟದಲ್ಲಿರುವ ಜಿಟಿಟಿಸಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ತಾಂತ್ರಿಕ ವಿಭಾಗವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಶಿಕ್ಷಣ ಮಹತ್ವದ್ದಾಗಿದೆ. ಹಲವು ಕ್ಷೇತ್ರಗಳಲ್ಲಿ ತಾಂತ್ರಿಕ ಶಿಕ್ಷಣದ ಲಾಭ ಪಡೆಯಲಾಗುತ್ತಿದೆ.

ಕಾಲೇಜು ಸುಸಜ್ಜಿತವಾದ ಕಟ್ಟಡದ ಜೊತೆಗೆ ಉತ್ತಮ ಅಧ್ಯಾಪಕ ವರ್ಗವನ್ನೂ ಹೊಂದಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕಲಿಕೆಯ ಜೊತೆಗೆ ಗಳಿಕೆಗೂ ಇಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು 2021-22ನೇ ಸಾಲಿನ ಡಿಪ್ಲೋಮಾ ಕೋರ್ಸಗೆ ಸೇರಿಕೊಂಡು ಶಿಕ್ಷಣ ಪಡೆಯುವಂತೆ ಹೇಳಿದರು.


ಕಾಲೇಜು ಪ್ರಾಚಾರ್ಯ ರಾಜಕುಮಾರ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ, ಕಾಲೇಜು ಅಧ್ಯಾಪಕ ವರ್ಗ ಹಾಗೂ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!