ರಾಯಚೂರು

ಕನ್ನಡ ಸೇವೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಯುವ ಹೋರಾಟಗಾರ ಶಿವಪುತ್ರ ಗಾಣದಾಳ ಬಡತನದ ಬೇಗೆಯಲ್ಲಿ ಸುಟ್ಟು ಬೆಂದಿರುವ ಪೋರ ಈಗ ಉತ್ತರ ಕರ್ನಾಟಕದ ಉಸ್ತುವಾರಿ..!

ವರದಿ : ಖಾಜಾಹುಸೇನ್
ಲಿಂಗಸುಗೂರು : ಶ್ರೀಮಂತನು ದುಡ್ಡು ಕೊಟ್ಟು ದೇವರನ್ನು ನೋಡುವನು. ಆದರೆ, ದೂರ ನಿಂತ ಬಡವನ ನೋಡಲು ದೇವರೇ ಎದ್ದು ನಿಲ್ಲುವನು ಎನ್ನುವ ತುಮಕೂರು ಸಿದ್ಧಗಂಗಾ ಶ್ರೀಮಠದ ಶಿವಕುಮಾರ ಮಹಾಸ್ವಾಮಿಗಳ ವಾಣಿಯಂತೆ ಯಾವ ಸಿರಿವಂತಿಕೆಯೂ ಇಲ್ಲದ, ಹೃದಯ ಸಿರಿವಂತಿಕೆಯನ್ನು ಮೈಗೂಡಿಸಿಕೊಂಡು ಓರಗೆಯವರ ಪಡೆಯನ್ನು ಬೆನ್ನಿಗೆ ಕಟ್ಟಿಕೊಂಡು ನಿರಂತರವಾದ ಹೋರಾಟ ಬದುಕಲ್ಲಿ ನೊಂದು, ಬೆಂದು ಕನ್ನಡ ನಾಡು, ನುಡಿ, ಜನರ ಸೇವೆಗಾಗಿಯೇ ತನ್ನ ಬದುಕನ್ನು ಮುಡಿಪಾಟ್ಟಿರುವ ಹುಟ್ಟು ಹೋರಾಟಗಾರ ಯುವ ಚಿಲುಮೆ ಶಿವಪುತ್ರ ಗಾಣದಾಳ ಈಗ ನೂತನವಾಗಿ ಉದ್ಘಾಟನೆಯಾಗಿರುವ ಸಂಘಟನೆಯ ಉತ್ತರ ಕರ್ನಾಟಕದ ರುವಾರಿಯಾಗಿ ಹೊರಹೊಮ್ಮಿದ್ದು ಮಾತ್ರ ರೋಚಕ.


ದಶಕಗಳ ಹಿಂದೆ ಜಯಕರ್ನಾಟಕ ಸಂಘಟನೆಯ ಮೂಲಕ ತನ್ನನ್ನು ಸಮಾಜಕ್ಕೆ ಪರಿಚಯ ಮಾಡಿಕೊಂಡ ಯುವಕ ಶಿವಪುತ್ರ ಕಳೆದ ಹತ್ತನ್ನೆರಡು ವರ್ಷಗಳಲ್ಲಿ ಭಗೀರಥ ಪ್ರಯತ್ನದ ಮೂಲಕ ರಾಜ್ಯಮಟ್ಟದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಬೆಳೆದು ನಿಂತುಕೊಂಡಿದ್ದಾನೆ. ಅಹಂಭಾವವನ್ನು ಸನಿಹಕ್ಕೂ ಬಿಟ್ಟುಕೊಳ್ಳದ ಯುವ ಹೋರಾಟಗಾರ ಹಿರಿಯರು, ಕಿರಿಯರು, ಓರಗೆಯವರು ಯಾರೇ ಸಿಕ್ಕರೂ ಅತ್ಯಂತ ಆತ್ಮೀಯತೆಯಿಂದ ಅಣ್ಣಾ ಎಂದು ಬಾಯಿ ತುಂಬಾ ಮಾತನಾಡುವ ಮಾತೃ ಹೃದಯಿ ಮನುಷ್ಯ.


ಇತ್ತೀಚೆಗಿನ ಬೆಳವಣಿಗೆಯಲ್ಲಿ ಜಯಕರ್ನಾಟಕ ಸಂಘಟನೆಯಿಂದ ಅಂತರ ಕಾಯ್ದುಕೊಂಡಿದ್ದು ತಟಸ್ಥವಾಗಿದ್ದ ಗಾಣದಾಳ, ಸುಮಾರು ಎರಡ್ಮೂರು ವರ್ಷಗಳಿಂದ ಸತತವಾಗಿ ಪ್ರಯತ್ನ ಪಟ್ಟು ಮರುಭೂಮಿಯಲ್ಲಿ ಓಯಾಸಿಸ್ಸಿನಂತೆ ಚಿಗುರೊಡೆಯುವ ಮೂಲಕ ದೀಪಕ್ ಎನ್ನುವವರ ನೇತೃತ್ವದಲ್ಲಿ ಆರಂಭವಾಗಿರುವ ಕರುನಾಡ ವಿಜಯಸೇನೆ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಉಸ್ತುವಾರಿ ಜೊತೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನೂ ಗಿಟ್ಟಿಸಿಕೊಂಡು ಸಮಾಜ ಸೇವೆಗೆ ಮತ್ತೊಮ್ಮೆ ಅಣಿಯಾಗಿ ನಿಂತಿರುವುದು ಹೆಮ್ಮೆಯ ವಿಷಯ.


ಸಂಘಟನೆ, ಸಂಘಟನಾಕಾರರು ಎಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ಶಿವಪುತ್ರ ಅವರ ಬಗ್ಗೆ ಪಕ್ಷಾತೀತವಾಗಿ ಎಲ್ಲರ ಮನಸ್ಸಿನಲ್ಲೂ ಒಂದು ಕಕ್ಕುಲಾಗಿ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಜ.28ಕ್ಕೆ ಬೆಂಗಳೂರಿನ ಗಾಂಧೀನಗರದಲ್ಲಿರುವ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ 3ನೇ ಮಹಡಿಯಲ್ಲಿ ಹಮ್ಮಿಕೊಂಡಿದ್ದ ಕರುನಾಡ ವಿಜಯಸೇನೆ ಸಂಘಟನೆಯ ಪ್ರಧಾನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಉತ್ತರ ಕರ್ನಾಟಕ ಭಾಗದಿಂದ ತೆರಳಿ ಭಾಗವಹಿಸಿದ್ದರು.


ಶಿವಪುತ್ರನಷ್ಟೇ ಸರಳ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಸಂಘಟನೆಯ ರಾಜ್ಯಾದ್ಯಕ್ಷ ದೀಪಕ್‍ಅವರು ತಾಯಿಕರುಳ ವ್ಯಕ್ತಿ. ಸದಾ ಹಸನ್ಮುಖಿಯಾಗಿರುವ ಅವರು, ಸಹಾಯ ಕೋರಿ ಹೋದವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನಾನುರಾಗಿ ವ್ಯಕ್ತಿತ್ವ. ಅವರ ಸರಳತೆ ಹಾಗೂ ಸಮಾಜಸೇವೆಗೆ ಸಾಕ್ಷಿಯಾಗಿ ತುಮಕೂರು ಸಿದ್ಧಗಂಗಾ ಶ್ರೀಮಠದ ಶ್ರೀಗಳು, ಸಂತೆಕೆಲ್ಲೂರು ಘನಮಠೇಶ್ವರ ಮಹಾಸ್ವಾಮಿಗಳು ಸೇರಿ ರಾಜ್ಯದ ವಿವಿದೆಡೆಯ ಮಠಾಧೀಶರು, ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.

ಅಶ್ವತ್‍ನಾರಾಯಣ್, ಪಂಚಾಯತ್‍ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಶಾಸಕರುಗಳು, ನಿರ್ಮಾಪಕರು, ಕಾರ್ಪೊರೇಟರ್‍ಗಳು ಸೇರಿ ನೂರಾರು ಸಂಖ್ಯೆಯಲ್ಲಿ ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಂಘಟನೆಯ ತತ್ವ ಸಿದ್ಧಾಂತಗಳ ಬಗ್ಗೆ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಕನ್ನಡ ನಾಡು, ನುಡಿ, ಜಲ, ಗಡಿ ಸೇರಿ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ ನಮ್ಮ ಸಂಘಟನೆ ಕಾರ್ಯ ಮಾಡಲಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರೋಗ್ಯ ದೃಷ್ಠಿಯಿಂದ ಜನಸಾಮಾನ್ಯರಿಗೆ ಮರಿಚೀಕೆಯಾಗುತ್ತಿರುವ ಸರಕರಿ ವ್ಯವಸ್ಥೆಯನ್ನು ಹತ್ತಿರಕ್ಕೆ ಕೊಂಡೊಯ್ಯುವ ಜೊತೆಗೆ ಜನಪರ ಧ್ವನಿಯಾಗಿ ನಿಲ್ಲುವ ಉದ್ದೇಶ ನಮ್ಮದಾಗಿದೆ. ಹತ್ತರಲ್ಲಿ ಹನ್ನೊಂದು ಎನ್ನುವ ಸಂಘಟನೆ ನಮ್ಮದಾಗದೇ, ಬಡವರ, ನೊಂದವರ, ನಿರ್ಗತಿಕರ, ಅಸಹಾಯಕರಿಗೆ ನೆರವಾಗಲು ಬಯಸುವ ಯುವ ಪೀಳಿಗೆಗೆ ಸದಾ ಸ್ವಾಗತವಿದೆ. ಈಗಾಗಲೇ ರಾಜ್ಯದಲ್ಲಿ ವಿಶಿಷ್ಠವಾಗಿ ನಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.

ನಿಸ್ವಾರ್ಥರಾಗಿ ಸೇವೆ ಸಲ್ಲಿಸುವ ಯುವ ಮನಸ್ಸುಗಳಿಗೆ ಇಲ್ಲಿ ಮುಕ್ತವಾದ ಅವಕಾಶಗಳಿವೆ. ಸರಕಾರ ಮತ್ತು ಬಡವರ ಮಧ್ಯ ನಮ್ಮ ಸಂಘಟನೆ ಕೊಂಡಿಯಂತೆ ಕೆಲಸ ಮಾಡುತ್ತದೆ. ಮತ್ತೊಬ್ಬರ ಬಗ್ಗೆ ಮಾತನಾಡದೇ, ಕೆಲಸ ಮಾಡುವ ಮೂಲಕ ನಮ್ಮತನವನ್ನು ರಾಜ್ಯದಲ್ಲಿ ಸೃಷ್ಠಿ ಮಾಡುವ ಗುರಿಯನ್ನು ಇಟ್ಟುಕೊಂಡು ದಾಪುಗಾಲಿಡುತ್ತಿದ್ದೇವೆ. ಇದಕ್ಕೆ ರಾಜ್ಯದ ಜನರ ಸಹಕಾರ, ಮಾಧ್ಯಮಗಳ ಬೆನ್ನುಚಪ್ಪರಿಸುವ ಕೆಲಸಗಳ ಅಗತ್ಯವಿದೆ ಎಂದು ಅತಿ ಆತ್ಮೀಯತೆಯಿಂದ ತಮ್ಮ ಯೋಜನೆಗಳ ಬಗ್ಗೆ ಹೇಳುತ್ತಾ ಹೋದರು.


ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಸಂಘಟನೆಗಳಿದ್ದು, ಈ ಸಂಘಟನೆ ವಿಶೇಷವಾಗಿ ಕನ್ನಡಿಗರ ಮನಸ್ಸಿಗೆ ಹತ್ತಿರವಾಗುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಯುವ ನೇತಾರರನ್ನು ಹುಟ್ಟುಹಾಕಲಿ, ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಲಂಚಬಾಕತನ, ದೌರ್ಜನ್ಯಗಳನ್ನು ತಡೆಗಟ್ಟಲು ಮುಂದಾಗಲಿ ಎನ್ನುವ ಆಶಯವೇ ಈ ವರದಿಯದ್ದಾಗಿದೆ.

One thought on “ಕನ್ನಡ ಸೇವೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಯುವ ಹೋರಾಟಗಾರ ಶಿವಪುತ್ರ ಗಾಣದಾಳ ಬಡತನದ ಬೇಗೆಯಲ್ಲಿ ಸುಟ್ಟು ಬೆಂದಿರುವ ಪೋರ ಈಗ ಉತ್ತರ ಕರ್ನಾಟಕದ ಉಸ್ತುವಾರಿ..!

  • chetan Hiremath lingasugur

    ತುಂಬಾ ಸಂತೋಷ ಅಣ್ಣಾ
    ನಿಮ್ಮಲ್ಲಿ ಆ ಒಂದು ಹೋರಾಟದ ಶಕ್ತಿ ಇನ್ನು ಹೆಚ್ಚಾಗಲಿ ಎಂದು ಹಾರೈಸುವೆ ಹಾಗೂ
    ನಮ್ಮ ಪ್ರೀತಿ ವಿಶ್ವಾಸ ನಿಮ್ಮ ಮೇಲೆ ಸದಾಕಾಲ ಇರುತ್ತೆ ಅಣ್ಣಾ

    ತುಂಬಾ ಧನ್ಯವಾದಗಳು

    ಇಂತಿ ನಿಮ್ಮವ
    ಚೇತನ್ ಹಿರೇಮಠ್ ಲಿಂಗಸುಗೂರು

    Reply

Leave a Reply

Your email address will not be published. Required fields are marked *

error: Content is protected !!