ರಾಯಚೂರು

ಚಿನ್ನದಗಣಿ ಅಧ್ಯಕ್ಷರಿಗೆ ಅವಹೇಳನ : ಶಾಸಕ ಹೂಲಗೇರಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ತೇಜೋವಧೆಗೆ ಮುಂದಾಗಿರುವ ಮಾಡಿರುವ ಶಾಸಕ ಡಿ.ಎಸ್.ಹೂಲಗೇರಿಯವರು 24 ಗಂಟೆಯೊಳಗೆ ಕ್ಷಮೆಯಚನೆ ಮಾಡಬೇಕೆಂದು ಬಿಜೆಪಿ ತಾಲೂಕಾದ್ಯಕ್ಷ ವೀರನಗೌಡ ಲೆಕ್ಕಿಹಾಳ ಆಗ್ರಹಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ ಅವರು, ತಾಲೂಕಿನ ಹಟ್ಟಿ ಬಳಿಯ ಚಿಂಚರಕಿ ಗ್ರಾಮದ ಬಳಿ ರಸ್ತೆಗೆ ಭೂಮಿಪೂಜೆ ಸಲ್ಲಿಸಲು ಅಗಮಿಸಿದ್ದ ಶಾಸಕರು ಶಿಷ್ಠಾಚಾರವನ್ನು ಮರೆತು ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿದ್ದರು. ಅದನ್ನು ಪ್ರಶ್ನಿಸಲು ಹೋದ ಬಿಜೆಪಿ ಕಾರ್ಯಕರ್ತರ ಮೇಲೆ ನಿಂದನೆಗಳನ್ನು ಮಾಡಿದ್ದಲ್ಲದೇ, ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಬಗ್ಗೆ ಹಗುರವಾದ ಪದಗಳನ್ನು ಬಳಕೆ ಮಾಡಿರುವುದು ಶಾಸಕರ ಘನತೆಗೆ ತಕ್ಕುದಲ್ಲ. ಶಾಸಕರಿಗೆ ಸಂಸ್ಕಾರವಿಲ್ಲ.

ಶಾಸಕರಿಗೆ ಬಿಜೆಪಿ ವಿಶೇಷವಾಗಿ ಸಂಸ್ಕಾರ ಕಲಿಸಿಕೊಡಬೇಕಾಗುತ್ತದೆ. ಬಾಯಿಗೆ ಬಂದಂತೆ ಮಾತನಾಡುವ ಮೂಲಕ ತಮ್ಮ ಸ್ಥಾನವನ್ನೂ ಶಾಸಕರು ಮರೆತಿದ್ದಾರೆ. ಶಾಸಕರನ್ನು ಕಂಡರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಭಾಸವಾಗುತ್ತದೆ. ಬೇಗನೇ ಶಾಸಕರು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಖಾರವಾಗಿ ಹೇಳಿಕೆ ನೀಡಿರುವ ಲೆಕ್ಕಿಹಾಳ, ಕೂಡಲೇ ಮಾಜಿ ಶಾಸಕ ವಜ್ಜಲ್‍ರ ಬಗ್ಗೆ ನಿಂದನಾತ್ಮಕವಾಗಿ ಹೇಳಿಕೆ ನೀಡಿರುವುದನ್ನು ವಾಪಸ್ ಪಡೆದು, ಕ್ಷೇತ್ರದ ಜನರಲ್ಲಿ ಹಾಗೂ ವಜ್ಜಲ್‍ರಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.


ಶಾಸಕರು ಕ್ಷಮೆ ಕೇಳದೇ ಇದ್ದರೆ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಬರುವ ದಿನಗಳಲ್ಲಿ ಶಾಸಕರು ತೆರಳುವ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗುತ್ತೇವೆಂದು ವೀರನಗೌಡ ಮಾತನಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!